ಸಂಪಾಜೆಗೆ ಮೆಸ್ಕಾಂ ಇಂಜಿನಿಯರ್ ಮತ್ತು ಅಧಿಕಾರಿಗಳು ಭೇಟಿ

0

ರಸ್ತೆ ಬದಿ ವಿದ್ಯುತ್ ಲೈನ್ ಗಳಿಗೆ ತಾಗುವ ಮರದ ಕೊಂಬೆ ತೆರವಿಗೆ ಸೂಚನೆ

ಮೆಸ್ಕಾಂ ಇಲಾಖೆಯ ಪುತ್ತೂರು ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಮಚಂದ್ರ ಹಾಗೂ ಇಲಾಖೆಯ ಅಧಿಕಾರಿಗಳು ದ.ಕ. ಸಂಪಾಜೆ ಗ್ರಾಮಕ್ಕೆ ಜು.16ರಂದು ಭೇಟಿ ನೀಡಿ ವಿದ್ಯುತ್ ಲೈನ್ ಪರಿಶೀಲನೆ ಮಾಡಿ,ಗೂನಡ್ಕ ಶಾರದಾ ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಜು.17ರಿಂದ ಸಂಪಾಜೆ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಬಳಿಯಿಂದ ವಿದ್ಯುತ್ ಲೈನ್ ಗಳಿಗೆ ತಾಗುವ ಮರದ ಕೊಂಬೆ ತೆರವು ಮಾಡಲು.ಇಲಾಖೆಯ ವತಿಯಿಂದ ಹತ್ತು ಜನರ ತಂಡ ಕಳುಹಿಸಿ ಕೊಡುವುದಾಗಿ ತಿಳಿಸಿದರು.

ಸಾಧ್ಯ ಆದಷ್ಟು ವಿದ್ಯುತ್ ಸಮಸ್ಯೆಗೆ ಪರಿಹಾರ ಮಾಡಲು ವ್ಯವಸ್ಥೆ ಮಾಡುವ ಭರವಸೆ ನೀಡಿದರು.

ಇತ್ತೀಚೆಗೆ ನಡೆದ ಸಂಪಾಜೆ ಗ್ರಾಮಸಭೆಯಲ್ಲಿ ವಿದ್ಯುತ್ ಸಮಸ್ಯೆ, ಮತ್ತು ವಿದ್ಯುತ್ ಲೈನಿಗೆ ತಾಗುವ ಅಪಾಯಕಾರಿ ಮರ ತೆರವು ಕುರಿತಂತೆ ಚರ್ಚೆ ನಡೆಸಲಾಗಿತ್ತು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್,ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು ಉಪಾಧ್ಯಕ್ಷ ಎಸ್.ಕೆ.ಹನೀಫ್ ಕಲ್ಲುಗುಂಡಿ, ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವಿಪತ್ತು ತಂಡದ ಚಿದಾನಂದ, ಸಾಮಾಜಿಕ ಕಾರ್ಯಕರ್ತರಾದ ಸಿದ್ದಿಕ್ ದರ್ಕಸ್,ಹಾರೀಸ್ ಝಮ್ ಝಮ್ ಮಾಜಿ ಪಂಚಾಯತ್ ಸದಸ್ಯ ರಾಮಚಂದ್ರ ಕಲ್ಲಗದ್ದೆ, ಸಂಪಾಜೆ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿರೇಂದ್ರ ಜೈನ್ ಉಪಸ್ಥಿತರಿದ್ದರು.