ಪೆರಾಜೆ: ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಪಲ್ಟಿಯಾದ ಕಾರು : ಜಖಂ

0

ಸುರಿಯುತ್ತಿರುವ ವಿಪರೀತ ಮಳೆಗೆ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಕಮರಿಗೆ ಪಲ್ಟಿಯಾದ ಘಟನೆ ಪೆರಾಜೆ ಗ್ರಾಮದ ದಾಸರಹಿತ್ಲುವಿನಲ್ಲಿ ಜು.18ರಂದು ಬೆಳಿಗ್ಗೆ ಸಂಭವಿಸಿದೆ.

ಕಾಸರಗೋಡಿನಿಂದ ಮಡಿಕೇರಿಗೆ ಮದುವೆ ಕಾರ್ಯಕ್ರಮಕ್ಕೆಂದು ತೆರಳುತ್ತಿದ್ದ ಕಾಸರಗೋಡು ಮೂಲದ ಮೂವರು ಪ್ರಯಾಣಿಕರಿದ್ದ ಕಾರು ದಾಸರಹಿತ್ಲುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕಮರಿಗೆ ಬಿದ್ದಿದ್ದು, ಮೂವರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.