ಸುಬ್ರಹ್ಮಣ್ಯ ಮಠದ ಪೀಠಾಧಿಪತಿ ವಿದ್ಯಾ ಪ್ರಸನ್ನ ತೀರ್ಥ ಶ್ರೀಗಳಿಂದ -ತಪ್ತ ಮುದ್ರಾ ಧಾರಣೆ

0

ಏಕಾದಶಿಯಾದ ಇಂದು ನಾಡಿನೆಲ್ಲೆಡೆ ತಪ್ತ ಮುದ್ರಾಧಾರಣೆ ಕಾರ್ಯಕ್ರಮ, ನಡೆದಿದ್ದು ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲೂ ಶ್ರೀಗಳಿಂದ ಮುದ್ರಾ ಧಾರಣೆ ನಡೆಯಿತು.

ಕೆಲ ಅರ್ಚಕರು, ಭಕ್ತರಿಗೂ ಮುದ್ರಾಧಾರಣೆ ನಡೆಸಲಾಯಿತು.
ಗುರುಗಳಿಂದ ಅಭಿಮಂತ್ರಿತವಾದ ಮುದ್ರೆಯನ್ನು ಧರಿಸಬೇಕು. ಇದರಿಂದ ಈ ದೇಹ ಪರಮಾತ್ಮನಿಗೆ ಸೇರಿದ್ದು ಎಂದು ಸೂಚಿಸಿದಂತೆಯೇ ನಮ್ಮ ಪಾಪಗಳೆಲ್ಲಾ ಬಿಸಿಮುದ್ರೆಯಿಂದ ಸುಟ್ಟು ಹೋಗಿ ನಾವು ವಿಷ್ಣುವಿನ ಸೇವೆಗೆ ಅರ್ಹರಾಗುತ್ತೇವೆ ಎಂಬ ನಂಬಿಕೆಯಿದೆ. ಮುದ್ರಾಧಾರಣೆಗೆ ಬಳಸುವ ಸುದರ್ಶನ ಮತ್ತು ಪಾಂಚಜನ್ಯ ಮುದ್ರೆಗಳನ್ನು ಬೆಂಕಿಯಲ್ಲಿ ಕಾಯಿಸಿ ಮೈ ಮೇಲೆ ಮುದ್ರೆ ಹಾಕಲಾಗುತ್ತದೆ. ಬಲ ಭುಜ, ಬಲಸ್ತನ ಭಾಗದಲ್ಲಿ ಚಕ್ರವನ್ನು, ಎಡ ಭುಜ, ಎಡ ಸ್ತನ ಭಾಗದಲ್ಲಿ ಶಂಖವನ್ನು, ಹೊಟ್ಟೆಯ ಮೇಲೆ ಒಂದು ಚಕ್ರವನ್ನು ಗುರುಗಳು ಮುದ್ರೆ ಹಾಕುತ್ತಾರೆ.
ಉಪವೀತರಾಗದ ಬಾಲಕರಿಗೆ ಹೊಟ್ಟೆಯ ಮೇಲೆ ಮಾತ್ರ ಒಂದು ಚಕ್ರ, ಸ್ತ್ರೀಯರಿಗೆ ಬಲ, ಎಡ ಕೈಗಳ ಮೇಲೆ ಮಾತ್ರ ಕ್ರಮವಾಗಿ ಚಕ್ರ, ಶಂಖಗಳನ್ನು ಮುದ್ರೆ ಹಾಕುತ್ತಾರೆ.