ದುಗ್ಗಲಡ್ಕ ಸರಕಾರಿ ಪ್ರೌಢಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರಾಗಿ ನಾರಾಯಣ ‌ಟೈಲರ್ ಆಯ್ಕೆ

0


ದುಗ್ಗಲಡ್ಕ ಸರಕಾರಿ ಪ್ರೌಢಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರಾಗಿ ಬಿ.ನಾರಾಯಣ ಟೈಲರ್ ಆಯ್ಕೆಯಾಗಿದ್ದಾರೆ.
ಜು. 01ರಂದು ಪೋಷಕರ ಸಭೆ ನಡೆದು ನಿಯಮಾನುಸಾರ ತೆರವಾದ 5 ಪೋಷಕ ಸದಸ್ಯರ ಸ್ಥಾನಗಳಿಗೆ ನೂತನ 5 ಸದಸ್ಯರು ಆಯ್ಕೆಯಾದರು. ಪೋಷಕ ಸದಸ್ಯರು ನೂತನ ಅಧ್ಯಕ್ಷರನ್ನಾಗಿ ನಾರಾಯಣ ಬಿ ಯವರನ್ನು ಆಯ್ಕೆ ಮಾಡಿದರು.
ಸದಸ್ಯರುಗಳಾಗಿ ನ.ಪಂ.ಸದಸ್ಯೆ ಶಶಿಕಲಾ ಎ., ವಾಸುದೇವ ಹೆಚ್., ಬೇಬಿ, ಜಾನಕಿ,ಶೀಲಾವತಿ,ವೀಣಾ ಹೆಚ್‌., ದೇವಪ್ಪ ನಾಯ್ಕ, ಅಣ್ಣು ಮೊಗೇರ, ಆಯಿಶಾ ಆಯ್ಕೆಯಾದರು.ನಾಮ ನಿರ್ದೇಶಿತ ಸದಸ್ಯರುಗಳಾಗಿ ಯತೀಶ್ ರೈ, ಲೀಲಾ ಬಾಬು, ದಿನೇಶ್ ಮೂಡೆಕಲ್ಲು,ಚಿತ್ರಾವತಿ (ಅಂಗನವಾಡಿ ಕಾರ್ಯಕರ್ತೆ), ಶಶಿಕಲಾ ( ಆರೋಗ್ಯ ಸಹಾಯಕಿ),ವೆಂಕಟ್ರಮಣ ಕೆ.ಎಸ್.( ಶಿಕ್ಷಕ ಪ್ರತಿನಿಧಿ), ಸುರೇಶ್ ಕುಮಾರ್ ಪಿ. ಮುಖ್ಯ ಶಿಕ್ಷಕರು(ಸದಸ್ಯ ಕಾರ್ಯದರ್ಶಿ) ಆಯ್ಕೆಯಾದರು.