ಪರಿಸರದ ಮನೆ ಮತ್ತು ಗ್ಯಾರೇಜ್ ಗಳಿಗೆ ನುಗ್ಗುತ್ತಿರುವ ಮಳೆ ನೀರು
ಸುಳ್ಯ ಮಾಣಿ ಮೈಸೂರು ಹೆದ್ದಾರಿ ಸಮೀಪ ರಸ್ತೆಯ ಎರಡು ಬದಿಗಳಲ್ಲಿ ಚರಂಡಿಗಳು ಅವೈಜ್ಞಾನಿಕವಾಗಿದ್ದು ಮಳೆಯ ಸಂದರ್ಭದಲ್ಲಿ ಚರಂಡಿ ತುಂಬಿ ನೀರು ಸ್ಥಳೀಯ ಮನೆ ಮತ್ತು ಗ್ಯಾರೇಜುಗಳ ಒಳಭಾಗಕ್ಕೆ ಹೋಗುತ್ತಿದೆ.
ಜುಲೈ 19ರಂದು ಸುರಿದ ಭಾರಿ ಮಳೆಗೆ ರಸ್ತೆಯ ಗುಡ್ಡೆಯ ಭಾಗದಿಂದ ಹರಿದು ಬರುತ್ತಿದ್ದ ಬೃಹತ್ ನೀರು ಸಮರ್ಪಕವಾಗಿ ಚರಂಡಿಯಲ್ಲಿ ಹರಿಯದೆ ಅಲ್ಲಿ ತುಂಬಿದ ನೀರು ರಸ್ತೆಯ ಮತ್ತೊಂದು ಬದಿಯಲ್ಲಿರುವ ಪಯಸ್ವಿನಿ ಕಾರು ಗ್ಯಾರೇಜಿನ ಒಳಗೆ ಬಂದಿದ್ದು, ಸುಮಾರು 2 ಅಡಿಯಷ್ಟು ಎತ್ತರದಲ್ಲಿ ನೀರು ತುಂಬಿದ ಘಟನೆ ನಡೆದಿದೆ.
ಅಲ್ಲದೇ ಈ ರಸ್ತೆಯ ಬಹುತೇಕ ಕಡೆಗಳಲ್ಲಿ ಇದೇ ಪರಿಸ್ಥಿತಿ ಇದ್ದು ಅಲ್ಲೇ ಸ್ವಲ್ಪ ದೂರದಲ್ಲಿರುವ ಪಯಸ್ವಿನಿ ಕಾಂಪ್ಲೆಕ್ಸ್ ಬಳಿ ಕೂಡ ಇದೇ ರೀತಿಯ ಘಟನೆ ನಡೆದಿದೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನವಹಿಸಿ ಸಮಸ್ಯೆಗೆ ಸ್ಪಂದಿಸುವಂತೆ ಸ್ಥಳೀಯರ ಆಗ್ರಹವಾಗಿದೆ.