ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಇಗ್ನೈಟ್ ಕ್ಲಬ್‌ನ ಉದ್ಘಾಟನೆ

0

ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಗ್ನೈಟ್ ಎಂಬ ಹೊಸ ಕ್ಲಬ್‌ನ್ನು ಜುಲೈ ೨೫ರಂದು ಉದ್ಘಾಟಿಸಲಾಯಿತು. ಇದು ವಿದ್ಯಾರ್ಥಿಗಳನ್ನು ಉದ್ಯೋಗ ನೇಮಕಾತಿ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಪೂರಕವಾಗಿ ವಿವಿಧ ಚಟುವಟಿಕೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಕಾರ್ಯಕ್ರಮವು ಕಾಲೇಜಿನ ಮೆಗಾ ಲ್ಯಾಬ್‌ನಲ್ಲಿ ನಡೆಯಿತು. ಇಗ್ನೈಟ್ ಅಧ್ಯಕ್ಷರಾಗಿರುವ ೪ನೇ ಸೆಮಿಸ್ಟರ್ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿದ್ಯಾರ್ಥಿ ನಂದನ್‌ಕೃಷ್ಣ ಉದ್ಘಾಟನಾ ಭಾಷಣ ನೀಡಿದರು. ಈ ಕ್ಲಬ್‌ನ್ನು ಅಧಿಕೃತವಾಗಿ ಉದ್ಘಾಟಿಸಿದ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ.ಯವರು ನಿರಂತರ ಸ್ವಯಂ ಸುಧಾರಣೆ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಸಂವಹನ ಕೌಶಲ್ಯ ಉತ್ತೇಜನದ ಅವಶ್ಯಕತೆ ಕುರಿತು ಮಾತನಾಡಿದರು.

ಪ್ರಾಂಶುಪಾಲ ಡಾ. ಸುರೇಶ ವಿ. ಕ್ಲಬ್‌ಗಳಲ್ಲಿ ಭಾಗವಹಿಸುವುದರಿಂದ ಕೌಶಲ್ಯ ಅಭಿವೃದ್ಧಿ ಮತ್ತು ಕಲಾತ್ಮಕ ಪ್ರತಿಭೆಯನ್ನು ಹೊರತರುವ ಬಗ್ಗೆ ಹಲವು ಸಲಹೆಗಳನ್ನು ಹಂಚಿಕೊಂಡರು. ಉಪಪ್ರಾಂಶುಪಾಲರು ಹಾಗೂ ಗಣಿತ ವಿಭಾಗದ ಮುಖ್ಯಸ್ಥರು ಡಾ. ಶ್ರೀಧರ್ ಕೆ. ಶುಭಾಶಯಗಳನ್ನು ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಕ್ಲಬ್‌ನ ಮೆಂಟರ್ ಪ್ರೊ. ವೆಂಕಟೇಶ್ ಯು.ಸಿ., ಉಪಾಧ್ಯಕ್ಷ ದರ್ಶನ್ ಆಳ್ವ, ಡೀನ್ ಅಕಾಡೆಮಿಕ್ ಡಾ. ಪ್ರಜ್ಞಾ ಎಂ.ಆರ್. ಹಾಗೂ ಡೀನ್ ರೀಸರ್ಚ್ ಮತ್ತು ವಿಭಾಗ ಮುಖ್ಯಸ್ಥರು CS&E(AI&ML) ವಿಭಾಗ ಡಾ. ಸವಿತಾ ಸಿ.ಕೆ. ಉಪಸ್ಥಿತರಿದ್ದರು.

ಕು. ಅನನ್ಯ ನಾಮಧಾರ ಧನ್ಯವಾದ ಪ್ರಸ್ತುತಪಡಿಸಿದರು. ಕಾರ್ಯಕ್ರಮವನ್ನು ಕಾರ್ಯದರ್ಶಿ ಕು. ಜ್ಞಾನಸಿರಿ ಕೆ.ಕೆ. ನಿರ್ವಹಿಸಿದರು. ಅದೇ ದಿನ ಕ್ಲಬ್‌ನ ಮೊದಲ ಚಟುವಟಿಕೆಯಾದ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಯಿತು. ಇದರಲ್ಲಿ ಕು. ಪ್ರಣಮ್ಯ ಪ್ರಥಮ ಸ್ಥಾನವನ್ನು ಗಳಿಸಿದರು ಮತ್ತು ಪ್ರಶಸ್ತಿಯನ್ನು ಪ್ರೊ. ವೆಂಕಟೇಶ್ ಯು.ಸಿ ಯವರು ವಿತರಿಸಿದರು.