ಅರಂತೋಡು – ತೊಡಿಕಾನ ಮಧ್ಯೆ ಬೃಹದಾಕಾರದ ಮರ ಬಿದ್ದು ರಸ್ತೆ ಬಂದ್, ಊರವರ ಸಹಕಾರದಿಂದ ಮರ ತೆರವು

0

ಅರಂತೋಡು – ತೊಡಿಕಾನ ಮಧ್ಯೆ ಮರಂಪಕಲ್ಲು ಬಳಿ ಜು.26ರಂದು ಬೃಹದಾಕಾರದ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ನಂತರ ವರ್ತಕ ಸಂಘದ ಅಧ್ಯಕ್ಷ ಸುಧಾಕರ ರೈ, ತೊಡಿಕಾನ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕಿಶೋರ್ ಉಳುವಾರು, ರಮೇಶ್ ನಂಬಿಯಾರ್, ಶಾಂತರಾಮ ತೊಡಿಕಾನ, ರಕ್ಷಿತ್ ಕುಂಟುಕಾಡು ಮತ್ತಿತರರು ಸೇರಿ ಮರದ ಗೆಲ್ಲುಗಳನ್ನು ಕಡಿದು ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಂದೇ ರಾತ್ರಿ ಬೆಳಗಿನ ಜಾವ ಅದೇ ಜಾಗದಲ್ಲಿ ಮರ ಬಿದ್ದು ಬೆಳಗಿನ ಜಾವದ ಅವಿನಾಶ್ ಬಸ್ಸ್ ಸುಳ್ಯ ಕಡೆಗೆ ಬರಲಿಲ್ಲವೇಕೆ ಎಂದು ಪ್ರಯಾಣಿಕರು ಕಾದು ಕುಳಿತ್ತಿದ್ದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ರವಿ ಪೂಜಾರಿ, ಮಾಜಿ ಸದಸ್ಯ ತಿಮ್ಮಯ್ಯ ಮೆತ್ತಡ್ಕ, ತೊಡಿಕಾನ ದೇವಾಲಯದ ಸಿಬ್ಬಂದಿ ರಾಧಾ, ಅವಿನಾಶ್ ಬಸ್ಸ್‌ನ ಸಿಬ್ಬಂದಿ ವರ್ಗದವರು ಮರದ ಗೆಲ್ಲುಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ೩ ಕರೆಂಟ್ ಕಂಬಗಳು ತುಂಡಾಗಿದ್ದು ೩ ಕಂಬಗಳು ವಾಲಿ ನಿಂತಿದೆ. ಶಿವಪ್ಪ ದೊಡ್ಡಡ್ಕ ರವರು ಕತ್ತಿ ಕೊಡಲಿ ಕೊಟ್ಟು ಸಹಕರಿಸಿದರು.