ಆಲೆಟ್ಟಿ: ಕೂರ್ನಡ್ಕ ಪೆರಾಜೆ ಸಂಪರ್ಕದ ರಸ್ತೆ ಮಧ್ಯೆ ಸೇತುವೆ ಮೇಲೆ ಬಂದ ನೀರು- ಸಂಚಾರ ಸ್ಥಗಿತ

0

ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ಮುಳುಗು ಸೇತುವೆಯ ಮೇಲೆ ಮಳೆ ನೀರು ಹರಿದು ರಸ್ತೆ ಬದಿ ಕೊಚ್ಚಿ ಕೊಂಡು ಹೋಗಿ ಸಂಪರ್ಕ ಕಡಿತಗೊಂಡಿದೆ.
ಈ ರಸ್ತೆಯ ಮೂಲಕ ಕೊಡಗಿನ ಪೆರಾಜೆಗೆ ಸಂಪರ್ಕದ ರಸ್ತೆಯಾಗಿದ್ದು ವಿಪರೀತ ನೀರಿನ ಹರಿವಿನಿಂದ ರಸ್ತೆಯು ಕೊಚ್ಚಿ ಕೊಂಡು ಹೋಗಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ ತಿಳಿದು ಬಂದಿದೆ.