ಕೆ ವಿಜಿ ಐಪಿಎಸ್ ಶಾಲೆಯ ಕೆಜಿ ವಿಭಾಗದ ಮಕ್ಕಳಿಗೆ ಶುಚಿತ್ವದ ಪಾಠವನ್ನು ಹೇಳಿಕೊಡುವ ಉದ್ದೇಶದಿಂದ ‘ಹ್ಯಾಂಡ್ ವಾಶ್ ಡೇ’ ಆಚರಿಸಲಾಯಿತು. ಕೈಯನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ಮಕ್ಕಳಿಗೆ ತಿಳಿಸಿ, ಸ್ವಚ್ಛತೆಗೆ ಆದ್ಯತೆಯನ್ನು ನೀಡಬೇಕು ಇಲ್ಲದಿದ್ದರೆ ಮಕ್ಕಳಿಗೆ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳನ್ನು ತಿಳಿಹೇಳಲಾಯಿತು. ಊಟಕ್ಕೆ ಮೊದಲು ಊಟವಾದ ನಂತರ ಕೈಯನ್ನು ಹೇಗೆ ತೊಳೆಯಬೇಕು ಎಂಬ ಬಗ್ಗೆ ಶಿಕ್ಷಕಿಯರು ಮಕ್ಕಳಿಗೆ ತಿಳಿ ಹೇಳಿದರು ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಡಾ.ರೇಣುಕಾ ಪ್ರಸಾದ್, ಶಾಲಾ ಕಾರ್ಯ ನಿರ್ವಹಣಾಧಿಕಾರಿ ಡಾ. ಉಜ್ವಲ್ ಯು ಹಾಗೂ ಪ್ರಾಂಶುಪಾಲರಾದ ಅರುಣ್ ಕುಮಾರ್ ಇವರುಗಳು ಶಿಕ್ಷಕಿಯರ ಈ ಪ್ರಯತ್ನಕ್ಕೆ ಅಭಿನಂದನೆಯನ್ನು ತಿಳಿಸಿದರು.