ಗೋದಾವರಿ ನದಿ ತಟದಿಂದ ಕನ್ಯಾಕುಮಾರಿ ತನಕ ಆರು ರಾಜ್ಯಗಳನ್ನು ಒಳಗೊಂಡಂತೆ ಇರುವ ಪಶ್ಚಿಮ ಘಟ್ಟದ ಸಾಲು ಪ್ರಪಂಚದ ಅತ್ಯಮೂಲ್ಯ ಸೂಕ್ಷ್ಮ, ಅತೀ ಸೂಕ್ಷ್ಮ, ಮಳೆ ಕಾಡು ಹಾಗೂ ಪ್ರಪಂಚದ ಎಲ್ಲಾ ರೀತಿಯ ಸಸ್ಯ ಮತ್ತು ಪ್ರಾಣಿ ಸಂಕುಲಗಳ ಆಗರವಾಗಿರುತ್ತದೆ.
ಪಶ್ಚಿಮ ಘಟ್ಟದ ರಕ್ಷಣೆಯ ವರದಿಯ ಬಗ್ಗೆ ಪೀಠಿಕೆ ಕಳೆದ ೨೦೧೧ ರಿಂದ ಇಲ್ಲಿಯ ತನಕ ಗೋದಾವರಿಯಿಂದ ಕನ್ಯಾಕುಮಾರಿಯ ನೀಲಗಿರಿ ತನಕ ೧ಲಕ್ಷ ೬೫ ಸ್ಟೇರ್ ಮೈಲ್ ನ ಉಳಿಯುವಿಕೆಗೆ ಪ್ರಪಂಚದ ಪರಿಸರದ ಹಲವಾರು ಕಾನೂನುಗಳನ್ನು ಆ ದಿನದಿಂದ ನಿರ್ವಹಿಸಿಕೊಂಡು ಬಂದಿದ್ದೇವೆ. ಆದರೆ ೨೦೧೧ ರಿಂದ ಇಲ್ಲಿಯ ತನಕ ಜನ ವಿರೋದಿಸಿದ ಲಾಭವನ್ನು ಶ್ರೀಮಂತ ಕಂಟ್ರಾಕ್ಟರ್ ದಾರರು ಶ್ರೀಮಂತ ರಾಜಕಾರಣಿಗಳು ಶ್ರೀಮಂತ ಬೇನಾಮಿ ಎಸ್ಟೇಟ್ ಒನರ್ ಗಳು ಈ ಹಿಂದೆ ಇದ್ದ ರಾಜಕಾರಣಿಗಳು ಪಡೆಯುತ್ತಿದ್ದು ಇತ್ತೀಚೆಗೆ ಪಶ್ಚಿಮ ಘಟ್ಟಗಳಲ್ಲಿ ಸಣ್ಣ ವಿದ್ಯುಸ್ಥಾವರಗಳು ಇದರ ಬಗ್ಗೆ ಸಣ್ಣ ಸಣ್ಣ ತಂಡಗಳಲ್ಲಿ ಕಳೆದ ೧೫ ವರ್ಷಗಳಿಂದ ರಾಜಕಾರಣಿಗಳು ಹಾಗೂ ಇತರ ಭಾಗಿಯಾದವರ ಮುಂದಿನ ದಿನಗಳಲ್ಲಿ ಹೆಸರುಗಳನ್ನು ಉಲ್ಲೇಕಿಸಬೇಕಾಗುವುದು. ಇವರು ಈ ವಿರುದ್ಧ ಹೋರಾಟದ ಲಾಭಾಂಶವನ್ನು ರಸ್ತೆಗಳು ಎತ್ತಿನಹೊಳೆ ಕೆಂಪುಹೊಳೆ ಅಡ್ಡಹೊಳೆ ಎಲ್ಲಾ ರಸ್ತೆಗಳ ಆವೈಜ್ಞಾನಿಕ ಕಾಮಗಾರಿಯ ಯೋಜನೆಯಿಂದ ಹಣ ಮಾಡಲು ಬಳಸಿಕೊಂಡಿರುತ್ತಾರೆ.ಈ ಎಲ್ಲಾ ಹಿನ್ನಲೆಯಲ್ಲಿ ಪರಿಸರದ ವಾಸ್ತವ ಸೂಕ್ಷ್ಮ ವರದಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಮಂಗಳೂರು ಮಲೆನಾಡು ಜಂಟಿ ಕ್ರಿಯಾ ಸಮಿತಿ ರಿ. ಸುಳ್ಯ ಆ ೧೦ ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಮಿತಿಯ ಸಂಚಾಲಕ ಪ್ರದೀಪ್ ಕುಮಾರ್ ಒತ್ತಾಯಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು ಗೋವರ್ಧನ್ ವ್ಯಾಜ್ಯದ ನಂತರ ಪಶ್ಚಿಮ ಘಟ್ಟದಲ್ಲಿ ಇರುವ ಬ್ರಿಟೀಷ್ ಆಡಳಿತದಿಂದ ಲೀಸ್‌ನ ಹೆಸರಿನಲ್ಲಿ ೬ ರಾಜ್ಯಗಳ ಸೂಕ್ಷ್ಮ ಅತೀ ಸೂಕ್ತ ಪ್ರದೇಶದಲ್ಲಿ ಇರುವ ೧೮೬ ವಿವಿಧ ರೀತಿಯ ೨೦೦೦ ದಿಂದ ೨೦.೦೦೦ ರ ಎಕರೆ ತನಕ, ಸರಿ ಸುಮಾರು ೫ ಲಕ್ಷ ಹೇಕ್ಟರ್ ಭೂಮಿಯನ್ನು ಒತ್ತುವರಿ ಮಾಡಿದ್ದು ಅದು ದೇಶದ ಪ್ರತಿಷ್ಟತ ಸರಿ ಸುಮಾರು ೧೦೦ ಜನರ ಶ್ರೀಮಂತ ರಾಜಕಾರಣಿ ಮತ್ತು ಉದ್ಯಮಿಗಳ ಕೈಯಲ್ಲಿ ವಿವಿಧ ರೀತಿಯಲ್ಲಿ ಬೇನಾಮಿ ಆಸ್ತಿಯಾಗಿ ಮುಂದುವರಿದ ಪರಿಣಾಮ ಅಲ್ಲದೇ ಪಶ್ಚಿಮ ಘಟ್ಟದಲ್ಲಿ ಹರಿಯುವ ಚಿಕ್ಕ ಚಿಕ್ಕ ನದಿಗಳಿಗೆ ವಿದ್ಯುತ್ ಉತ್ಪಾದನೆ ಹೆಸರಿಲ್ಲಿ ಅವೈಜ್ಞಾನಿಕವಾಗಿ ಕಟ್ಟಿ ಹಾಳುಗೆಡವಿ ತೆರವುಗೊಳಿಸಲು ವರದಿಯಲ್ಲಿ ಯಾವುದೇ ರೀತಿಯ ಆದೇಶ ಇಲ್ಲದೆ, ಸ್ಥಳೀಯ ೧೯೦೪ರ ಮತ್ತು ೧೯೬೪ ರ ರೀ ಶಟಲ್ಮೆಂಟ್ ಕಂದಾಯ ಕಾನೂನು ಪ್ರಕಾರ ಸ್ಥಳೀಯರಿಗೆ ಹಕ್ಕು ಇಲ್ಲದೆ ಹಾಗು ಸ್ಥಳೀಯ ಬಾಗಿತನ ಸೇರ್ಪಡೆಯಾಗದಿರುವುದು ತಪ್ಪಾಗಿರುತ್ತದೆ ಎಂದು ಹೇಳಿದರು.
ಆದ್ದರಿಂದ ಆ ಪ್ರಕಾರ ಮಾಧವ ಗಾಡ್ಗಿಲ್ ೨೦೧೧ ಅವರ ವರದಿ ಮತ್ತು ಪುನರೂಪಿ ಪಶ್ಚಿಮ ಘಟ್ಟ ಉಳಿವಿಗೆ ಕಸ್ತೂರಿ ರಂಗನ್ highಟeveಟ ತಿoಡಿಞiಟಿg ಛಿommiಣಣee ನೇಮಕವಾಗಿ ಮಾಧವ ಗಾಡ್ಗಿಳ್ ವರದಿಗಿಂತ ಸರಳವಾಗಿ ಪರಿಸರ ಸಂರಕ್ಷಣೆಯ ಅಂಗವಾಗಿ ಗ್ರೇಟರ್ ತಲಕಾವೇರಿ ಅನೆ ಕಾರಿಡಾರ್ ಮತ್ತು ಅಭಯಾರಣ್ಯ ವಿಸ್ತರಣೆಯ ರೂಪುರೇಶೆ ಉದ್ದೇಶ ಹೊಂದಿರುತ್ತದೆ.
ಆ ಪ್ರಕಾರ ಅರಣ್ಯದ ಒಳಗೆ ಸರಕಾರದ ಅರಣ್ಯ ಇಲಾಖೆಯ ಅಡಿಯಲ್ಲಿರುವ ವಿವಿಧ ರಿತೀಯ ೫ ಲಕ್ಷ ಹೇಕ್ಟರ್ ಭೂಮಿಯ ಒಟ್ಟು ೪೦೦೦ ಕಾಡಿನಂಚಿನ ಕಂದಾಯ ಭೂಮಿಯ ಒಟ್ಟು ವಿಸ್ತೀರ್ಣ ದ ಬಾಬು ಹೆಚ್ಚಾಗಿರುತ್ತದೆ. ಅದು ೪೦೦೦ ಕಂದಾಯ ಗ್ರಾಮಗಳ ಸರಿಸುಮಾರು ಪಶ್ಚಿಮ ಘಟ್ಟದ ಸಾಲಿನ ೪ ಕೋಟಿ ಕೃಷಿ ಕಾರ್ಮಿಕರ ಒಟ್ಟು ಜನ ಸಂಖ್ಯೆಯ ಒತ್ತುವರಿದಾರ ಆಸ್ತಿಯು ಲೀಸ್ ನ ಒಟ್ಟು ಭೂಮಿಯು ಕೇವಲ ೧೦೦ ಜನರ ಸುಪರ್ದಿಯಲ್ಲಿರುತ್ತದೆ.
ಆದ್ದರಿಂದ ನಮ್ಮ ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡಲು ಹೋರಾಟಗಾರರಾದ ನಮ್ಮ ಸಂಘದ ಸಂಪೂರ್ಣ ಬೆಂಬಲ ಇರುತ್ತದೆ ಆದರೆ ಈ ವರದಿಯಲ್ಲಿ ಈ ಬೇಡಿಕೆಗಳನ್ನು ಸೇರ್ಪಡೆ ಗೊಳೊಸಬೇಕೆಂದು ಹೇಳಿದರು. ವರದಿಯನ್ನು ಪರಸ್ಕರಿಸಲು ಸ್ಥಳೀಯ ನಾಗರಿಕರ ಭಾಗವಹಿಸುವಿಕೆಗೆ ಮತ್ತು ಗ್ರಾಮ ಪಂಚಾಯತ್ ಗಳ ಬಾಗವಹಿಸುವಿಕೆಯ ಅವಕಾಶಕ್ಕೆ ಮೊದಲ ಪ್ರಾಶಸ್ತ್ರ ಕೊಡತ್ತಕ್ಕದ್ದು.ಪ್ರಸ್ತುತ ಕಮಿಟಿಯಲ್ಲಿ ವರದಿಯಲ್ಲಿ ರಚಿಸುವ ಸ್ಥಳೀಯ ಎಂ.ಎಲ್.ಎ ತನಕ ಇರುತ್ತದೆ.
ಆಯಾಯ ರಾಜ್ಯದ ಆಯಾಯ ಮಲೆನಾಡಿನ ಜಿಲ್ಲೆಗಳ ಹಾಗೂ ತಾಲೂಕು ಜಿಲ್ಲಾ ಕೌಂಸ್ಲೆರ್ ರಕ್ಷಣೆಯನ್ನು ಈಶಾನ್ಯ ರಾಜ್ಯಗಳಂತೆ ಮಾಡಬೇಕಾಗಿರುತ್ತದೆ. ಆ ಪ್ರಕಾರ ಪಶ್ಚಿಮ ಘಟ್ಟದ ರಕ್ಷಣೆಯಲ್ಲಿ ಇಲ್ಲಿನ ಭಾಷೆ, ಆಹಾರ ಪದ್ದತಿ, ಧಾರ್ಮಿಕ ಪದ್ಧತಿ, ಸಂಸ್ಕೃತಿ ಉಳಿಸುವಿಕೆಗೆ ಈ ವರದಿಯಲ್ಲಿ ಸೇರ್ಪಡಿಸಿ ಆಯಾಯ ಜಿಲ್ಲೆಗಳಿಗೆ ಕೊಡಬೇಕು ಹಾಗು ೬ ರಾಜ್ಯಗಳಿಗೆ ಈ ವರದಿಯಲ್ಲಿ ಇರುವ ಸರಕಾರಿ ಲೀಸ್ ಭೂಮಿಯನ್ನು ಇದರಲ್ಲಿ ನೋಟಿಫಿಕೇಶನ್ ಹಾಕಿ ವಶಪಡಿಸಿಕೊಳ್ಳಬೇಕು.
ಈ ಹಿಂದಿನ ಅನುಭೋಗ ಹಕ್ಕು ಜಮ್ಮ ಕಾನ ಬಾನ ಸೊಪ್ಪಿನಬೆಟ್ಟ ಈ ಹಿಂದಿನಂತೆ ಊರ್ಜಿತಗೊಳಿಸಿ ೧೦೦ ಮೀಟರ್‌ಗೆ ನಿರ್ಬಂದಿಸಬೇಕು
ಈ ಯೋಜನೆ ಶೀಘ್ರದಲ್ಲಿ ಜಾರಿಗೊಳಿಸಿ ಈ ಯೋಜನೆ ೬ ನೇ ಕರಡು ಮಸೂದೆಯಲ್ಲಿ ಸಂವಿಧಾನದ ೩೭೧ ವಿಧಿಯನ್ನು ಅಳವಡಿಸಬೇಕು.
ಎಲ್ಲಾ ತರಹದ ರಸ್ತೆ ಡ್ಯಾಂ ಕಟ್ಟಡಗಳ ಕಟ್ಟುವಿಕೆಗೆ ಸ್ಥಳೀಯ ತಿಳಿದ ವೈಜ್ಞಾನಿಕ ಜನರನ್ನು ಸೇರಿಸಿ ಮಾದರಿ ಕರಡು ಮಾಡಿ ಯಥಾವತ್ತಾಗಿ ಅಭಿವೃದ್ಧಿ ಮಾಡಿ ನಿಬಂಧನೆಗಳನ್ನು ಸೇರ್ಪಡಿಸಬೇಕು.
೨೦೦೦ ಇಸವಿಯಿಂದ ಮಲೆನಾಡಿನ ಸೂಕ್ಷ್ಮ ಪ್ರದೇಶದಲ್ಲಿ ಪರಭಾರೆ ಮಾಡುವುದನ್ನು ರದ್ದು ಮಾಡಬೇಕು ಹಾಗು ಅವೈಜ್ಞಾನಿಕವಾಗಿ ರಸ್ತೆ ಮಾಡಿದ ಇಂಜಿನಿಯರ್ ಕಂಟ್ರಾಟರ್ ರಾಜಕಾರಿಣಿ ಗಳ ಮೇಲೆ ಕ್ರಮ ಕೈಗೊಳ್ಳಬೇಕು. ಮಲೆನಾಡಿನ ಜಿಲ್ಲೆ ಮತ್ತು ತಾಲೂಕಿನ ಕೇಂದ್ರಗಳಿಗೆ ಜಿಲ್ಲಾಧಿಕಾರಿ ತಹಶೀಲ್ದಾರರು ಸೆಕ್ರೆಟಾರಿ ಇಂಜಿನಿಯರ್ ಗಳ ನೇಮಕಾತಿ ಸ್ಥಳೀಯ ಅನುಭವ ಹಾಗು ಸ್ಥಳೀಯ ಮಲೆನಾಡಿನ ಜನಿಸಿದ ಜನರನ್ನೆ ಆಯ್ಕೆ ಮಾಡಿಕೊಳ್ಳಬೇಕು.ಈ ಯೋಜನೆ ಜಾರಿಯಲ್ಲಿ ಈ ಪಶ್ಚಿಮ ಘಟ್ಟದ ಎಲ್ಲಾ ತರದ ಅಭಿವೃದ್ಧಿಯನ್ನು ಕುದುರೆಮುಖ ಅದಿರು ಕಂಪೆನಿಯನ್ನು ನಿಲ್ಲಿಸಿದ ಹಾಗೆ ಇನ್ನೊಂದು ಕರಡು ಮಸೂದೆಯಲ್ಲಿ ತಡೆಯಾಬೇಕು.ಈ ಕೂಡಲೇ ಸ್ಥಳೀಯ ಆಧಾರ್, ಪಡಿತರ ಚೀಟಿ ಮತ್ತು ಚುನಾವಣಾ ಕಾರ್ಡ್ ಅಥವಾ ವಂಶವಳಿ ಪ್ರಕಾರ ಹುಟ್ಟುವಳಿ ಸ್ಥಳೀಯರೊಂದಿಗೆ ಇಲ್ಲದಿದ್ದರೆ, ಕಂದಾಯ ಭೂಮಿಯನ್ನು ವಶಪಡಿಸಿ ಪರಿಹಾರ ಕೊಟ್ಟು ಭೂಮಿಯನ್ನು ವಶಪಡಿಸಿಕೊಂಡು ಕಳೆದ ೧೪ ವರ್ಷದ ನಮ್ಮ ಹೊರಾಟದಿಂದ ಶ್ರೀಮಂತ ರಾಜಾಕಾರಿಣಿ, ಬೇನಾಮಿ ಲೀಸ್ ಎಸ್ಟೆಟ್ ಒನರ್, ಬೇನಾಮಿ ಕಂಪೆನಿಯಲ್ಲಿ ನವ ರಾಜಾಕಾರಣಿಗಳ ಚಿಕ್ಕ ಡ್ಯಾಂ ಪ್ರಾಜಕ್ಟ್ ಗಳು ಹಾಗು ಅವೈಜ್ಞಾನಿಕ ಎತ್ತಿನಹೊಳೆ ೩೦ ಸಾವಿರ ಕೋಟಿಯ ಹಾಗು ಲಕ್ಷ ಕೋಟಿ ಬಾಚುವಿಕೆ ಹಾಗು ಸದೃಡವಾದ ಮೌಂಟನ್ ರಸ್ತೆಯಾದ ಶಿರಾಡಿ ಹಾಗು ವೈಜ್ಞಾನಿಕ ರೈಲ್ವೇ ರಸ್ತೆಯನ್ನು ಹಾಳುಗೆಡವಿದ ನಮ್ಮ ಹೋರಾಟದ ಲಾಭದಿಂದ ಬೇರೆಯವರಿಗೆ ಮೇಲೆ ಹೋಗುವುದು ಕಳೆದ ೧೪ ವರ್ಷದಿಂದ ಅನುಕೂಲವಾಗಿರುತ್ತದೆ.
ಈ ಕೂಡಲೇ ಕಸ್ತೂರಿ ರಂಗನ್ ವರದಿಯನ್ನು ಈ ಮೇಲಿನ ಅಂಶಗಳೊಂದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಜಾರಿಗೊಳಿಸಿ ಪ್ರಕೃತಿ ಹಾಗು ಕಾಡಿನಂಚಿನ ಗ್ರಾಮಗಳನ್ನು ಯಾಥಪ್ರಕಾರ ಉಳಿಸಬೇಕು ಹಾಗು ಮಲೆನಾಡಿನ ಮಣ್ಣಿನ ಸತ್ವಸಾರ ಗೊತ್ತಿಲ್ಲದ ಎಲ್ಲಾ ಜಿಲ್ಲಾಧಿಕಾರಿಗಳು ಕಂದಾಯ ಅಧಿಕಾರಿಗಳನ್ನು ಈ ಕೂಡಲೇ ವರ್ಗಾವಣೆ ಮಾಡಬೇಕೆಂದರು.
ಪತ್ರಿಕಾಗೋಷ್ಠಿ ಯಲ್ಲಿ ಸಮಿತಿಯ ಮುಖಂಡರುಗಳಾದ ಅಶೋಕ್ ಎಡಮಲೆ ಚೇತನ್ ಪಾನತ್ತಿಲ ಉಪಸ್ಥಿತರಿದ್ದರು.