ಗೂನಡ್ಕ: ಮನೆಯ ಹಿಂಬದಿ ಬರೆ ಕುಸಿತ

0

ಮನೆಯ ಹಿಂಬದಿಗೆ ಬರೆ ಕುಸಿದ ಘಟನೆ ಗೂನಡ್ಕ ಬೈಲೆಯಲ್ಲಿ ಆ.13 ರಂದು ತಡರಾತ್ರಿ ಸಂಭವಿಸಿದೆ.

ಗೂನಡ್ಕ ಬೈಲೆ ಪುಷ್ಪಾವತಿ ಆಚಾರಿಯವರ ಮನೆಯ ಹಿಂಬದಿಗೆ ರಾತ್ರಿ ವೇಳೆ ಬರೆ ಕುಸಿದಿದೆ. ಮನೆಯಲ್ಲಿ ಮಹಿಳೆಯು ಒಬ್ಬಂಟಿ ಯಾಗಿದ್ದ್ದು ಕೂಡಲೇ ಪಕ್ಕದ ಮನೆಗೆ ಹೋಗಿ ವಿಷಯ ತಿಳಿಸಿದ್ದಾರೆ. ಅಲ್ಲದೆ ಗೂನಡ್ಕ ಬೈಲೆ ಶ್ರೀ ಶಿರಾಡಿ ದೈವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ ಯಎಡ ಬಾಗ ಕುಸಿಯುವ ಭೀತಿ ಎದುರಾಗಿದೆ.