ಸುದ್ದಿ ಸಮೂಹ ಸಂಸ್ಥೆಗಳು ಸುಳ್ಯ ಮತ್ತು ಷರಾ ಪ್ರಕಾಶನ ಸುಳ್ಯ ಇದರ ವತಿಯಿಂದ ನಡೆದ ದೇಶ ಭಕ್ತಿ ಗಾಯನ ಸ್ಪರ್ಧೆ-2024

0

ಒಟ್ಟು 15 ಶಾಲಾ ತಂಡಗಳು ಅಂತಿಮ ಹಂತಕ್ಕೆ ಆಯ್ಕೆ

ಆ.24ರಂದು ಸುದ್ದಿ ಸ್ಟುಡಿಯೋದಲ್ಲಿ ಅಂತಿಮ ಸ್ಪರ್ಧೆ

ಸುದ್ದಿ ಸಮೂಹ ಸಂಸ್ಥೆಗಳು ಸುಳ್ಯ ಮತ್ತು ಷರಾ ಪ್ರಕಾಶನ ಸುಳ್ಯ ಇದರ ಜಂಟಿ ಆಶ್ರಯದಲ್ಲಿ 78ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಸುಳ್ಯ ತಾಲೂಕಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ ದೇಶ ಭಕ್ತಿ ಗಾಯನ ಸ್ಪರ್ಧೆ-2024 ಇದರಲ್ಲಿ 15 ಶಾಲಾ ತಂಡಗಳು ಅಂತಿಮ‌ ಹಂತಕ್ಕೆ ಆಯ್ಕೆಯಾಗಿದೆ‌.‌

ತಾಲೂಕಿನ ವಿವಿಧ ಶಾಲಾ ಕಾಲೇಜುಗಳಿಂದ ಬಂದ ತಂಡಗಳಲ್ಲಿ ಒಟ್ಟು 36 ತಂಡಗಳನ್ನು ಪರಿಗಣನೆಗೆ ತೆಗೆದುಕೊಂಡು ಮೊದಲ ಸುತ್ತಿನಲ್ಲಿ 4 ಜನ ನಿರ್ಣಯಕರ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿತ್ತು. ಅದರಲ್ಲಿ 15 ಶಾಲಾ ಕಾಲೇಜಿನ‌ ತಂಡಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿದೆ. ಆಯ್ಕೆಯಾದ ತಂಡಕ್ಕೆ ಆ.24ರ ಶನಿವಾರದಂದು ಬೆಳಿಗ್ಗೆ 10 ಗಂಟೆಯಿಂದ ಸುದ್ದಿ ಸ್ಟುಡಿಯೋದಲ್ಲಿ ಸ್ಪರ್ಧೆ ನಡೆಯಲಿದೆ.

ಆಯ್ಕೆಯಾದ ತಂಡಗಳು ಹೀಗಿವೆ :
ಪ್ರಾಥಮಿಕ ವಿಭಾಗ : ಸ.ಹಿ.ಪ್ರಾ.ಶಾಲೆ ಕುಕ್ಕುಜಡ್ಕ, ಸೈಂಟ್ ಬ್ರಿಜಿಡ್ಸ್ ಕನ್ನಡ ಮಾಧ್ಯಮ ಶಾಲೆ ಸುಳ್ಯ, ಸ.ಹಿ.ಪ್ರಾ.ಶಾಲೆ ಚೊಕ್ಕಾಡಿ(ಅಜ್ಜನಗದ್ದೆ) ಮತ್ತು ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ ಆಯ್ಕೆಯಾಗಿದೆ.

ಪ್ರೌಢಶಾಲಾ ವಿಭಾಗದಲ್ಲಿ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ, ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸುಳ್ಯ, ಸರಕಾರಿ ಪ್ರೌಢಶಾಲೆ ಎಲಿಮಲೆ, ಸ.ಪ್ರೌಢಶಾಲೆ ಐವರ್ನಾಡು ಆಯ್ಕೆಯಾಗಿದೆ.

ಕಾಲೇಜು ವಿಭಾಗದಲ್ಲಿ ರೋಟರಿ ಪದವಿ ಪೂರ್ವ ಕಾಲೇಜು ಸುಳ್ಯ, ನೆಹರೂ ಮೆಮೋರಿಯಲ್ ‌ಕಾಲೇಜು ಸುಳ್ಯ ಮತ್ತು ನೆಹರೂ ಮೆಮೋರಿಯಲ್ ಕಾಲೇಜು ಅರಂತೋಡು ಆಯ್ಕೆಯಾಗಿದೆ.

ಹಿನ್ನೆ‌ಲೆ ಸಂಗೀತ ವಿಭಾಗದ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸೈಂಟ್ ಜೋಸೆಫ್ ಸುಳ್ಯ, ಪ್ರೌಢಶಾಲಾ ವಿಭಾಗದಲ್ಲಿ ರೋಟರಿ ಪ್ರೌಢಶಾಲೆ ಸುಳ್ಯ, ಸ್ನೇಹ ಪ್ರೌಢಶಾಲೆ ಸುಳ್ಯ ಹಾಗೂ ಕಾಲೇಜು ವಿಭಾಗದಲ್ಲಿ ರೋಟರಿ ಪದವಿ ಪೂರ್ವ ಕಾಲೇಜು ಸುಳ್ಯ ಆಯ್ಕೆಯಾಗಿದೆ.