ಸುಳ್ಯ – ಕನಕಮಜಲು ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ

0

ಜನರ ಬೇಡಿಕೆಯಂತೆ ಪಂಜಿಗುಂಡಿ ತನಕ ವಿಸ್ತರಣೆ

ಸುಳ್ಯದಿಂದ ಕನಕಮಜಲು ತನಕ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರವನ್ನು ಶಾಲಾ ವಿದ್ಯಾರ್ಥಿಗಳು ಮತ್ತು ಜನರ ಬೇಡಿಕೆಯಂತೆ ಕನಕಮಜಲು ಗ್ರಾಮದ ಪಂಜಿಗುಂಡಿ ಕಾಲನಿ ತನಕ ವಿಸ್ತರಣೆ ಮಾಡಲಾಗಿದ್ದು, ಆ.22ರಂದು ಬೆಳಿಗ್ಗಿನಿಂದ ಬಸ್ ಪಂಜಿಗುಂಡಿಯಿಂದ ಸಂಚಾರ ಆರಂಭಿಸಿದೆ.

ಕೆ.ಎಸ್.ಆರ್.ಟಿ.ಸಿ. ಬಸ್ ಸುಳ್ಯ ಘಟಕದಿಂದ ಕನಕಮಜಲು ತನಕ ಬರುತ್ತಿದ್ದು , ಸ್ಥಳೀಯರಾದ ಕೆ. ಮಹಮ್ಮದ್ ಫವಾಜ್, ವಿಜಯಕುಮಾರ್ ನರಿಯೂರು, ನಾರಾಯಣ ಪಂಜಿಗುಂಡಿ ಮತ್ತಿತರರು ಸೇರಿ ಕನಕಮಜಲು ಗ್ರಾಮದ ಪಂಜಿಗುಂಡಿ ಕಾಲನಿ ತನಕ ಬಸ್ ಸಂಚಾರವನ್ನು ವಿಸ್ತರಿಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದ್ದರು.
ಮ‌ನವಿಗೆ ಸ್ಪಂದಿಸಿದ ಸಚಿವರು ಸಂಬಂಧಿಸಿದ ವಿಭಾಗಾಧಿಕಾರಿಗಳಿಗೆ ತಿಳಿಸಿದ್ದು, ಆ.22ರಿಂದ ಬಸ್ ಪಂಜಿಗುಂಡಿ ತನಕ ಬರುತ್ತಿರುವುದಾಗಿ ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಇಬ್ರಾಹಿಂ ಕಾಸಿಂ ಕನಕಮಜಲು, ಮಾಜಿ ಅಧ್ಯಕ್ಷೆ ವಸಂತಿ, ವಿಜಯಕುಮಾರ್ ನರಿಯೂರು, ಬಾಬು, ಸುಮಂತ, ರಾಘವ, ರವಿ, ಗಣೇಶ್, ವಿದ್ಯಾರ್ಥಿಗಳ ಪೋಷಕರು ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.