ಸುಳ್ಯದ ಹಳೆಗೇಟಿನ ರೂಪಾ ಕಾಂಪ್ಲೆಕ್ಸ್ ನಲ್ಲಿ ಶ್ರೀ ಭಗವತಿ ಸ್ಟೀಲ್ಸ್ ಶುಭಾರಂಭ

0

ಸುಳ್ಯದ ಹಳೆಗೇಟಿನ ರೂಪಾ ಕಾಂಪ್ಲೆಕ್ಸ್ ನಲ್ಲಿ ಲಯನ್ ರಮೇಶ್ ಶೆಟ್ಟಿ ಯವರ ಮಾಲಕತ್ವದ ಮೂರನೇ ಸಂಸ್ಥೆ
ಶ್ರೀ ಭಗವತಿ ಸ್ಟೀಲ್ಸ್
ಆ.22 ರಂದು ಶುಭಾರಂಭ ಗೊಂಡಿತು.

ಮುಖ್ಯ ಅಭ್ಯಾಗತರಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್ ರವರು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಕಾರ್ಯದರ್ಶಿ ಗಿರೀಶ್ ದೇವರಗುಂಡ,
ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷ ಶ್ಯಾಮ್ ಪ್ರಸಾದ್ ಅಡ್ಡಂತಡ್ಕ, ಜನತಾ ಗ್ರೂಪ್ಸ್ ಮಾಲಕ ಅಬ್ದುಲ್ ಮಜೀದ್, ಟ್ಯಾಕ್ಸ್ ಕನ್ಸಲ್ಟೆಂಟ್ ಶ್ರೀಪತಿ ಭಟ್ ಮಜಿಗುಂಡಿ, ನಿವೃತ್ತ ಪ್ರಾಂಶುಪಾಲ ಬಾಲಚಂದ್ರ ಗೌಡ, ಕಾಂಪ್ಲೆಕ್ಸ್ ಮಾಲಕ ಸುಂದರ ರಾವ್, ಮಾಲಕರ ಸಹೋದರ ಭುಜಂಗ ಶೆಟ್ಟಿ, ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ ಉಪಸ್ಥಿತರಿದ್ದರು.

ಸಂಗೀತ ಶಿಕ್ಷಕರಾದ ಮಹಾಬಲೇಶ್ವರ ಭಿರ್ಮಕಜೆ ಯವರು ಪ್ರಾರ್ಥಿಸಿದರು.
ಸುನಿಲ್ ಕೇರ್ಪಳ ಪ್ರಾಸ್ತಾವಿಕ ಮಾತನಾಡಿದರು. ಪ್ರಿಯಾಂಕ ಕುಶಾಂತ್ ಶೆಟ್ಟಿ ಸ್ವಾಗತಿಸಿ, ಸಂಸ್ಥೆಯ ಮಾಲಕ ರಮೇಶ್ ಶೆಟ್ಟಿ ಕಲ್ಯಂಗಾಡ್ ವಂದಿಸಿದರು. ಬೂಡು ರಾಧಾಕೃಷ್ಣ ರೈ ಕಾರ್ಯಕ್ರಮ ನಿರೂಪಿಸಿದರು.

ವಿಶಾಲ ಪಾರ್ಕಿಂಗ್ ವ್ಯವಸ್ಥೆ ಇದ್ದು ಒಂದೇ ಮಳಿಗೆಯಲ್ಲಿ ಮನೆ ಕಟ್ಟಡದ ಮೇಲ್ಚಾವಣಿ ನಿರ್ಮಾಣ ಹಾಗೂ ಫ್ಯಾಬ್ರಿಕೇಶನ್ ಕೆಲಸಕ್ಕೆ ಬೇಕಾದ ಪ್ರಸಿದ್ಧ ಕಂಪನಿಯ ಎಲ್ಲಾ ‌ತರದ ಸ್ಟೀಲ್ ಮೆಟೀರಿಯಲ್ಸ್ ದೊರೆಯುತ್ತದೆ‌ ಎಂದು ‌ಮಾಲಕರು ತಿಳಿಸಿದರು.
ಈ ಸಂದರ್ಭದಲ್ಲಿ ಮಾಲಕರ ಬಂಧು ವರ್ಗದವರು ಹಾಗೂ ‌ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು. ಶುಭಾರಂಭದ ಪ್ರಯುಕ್ತ ಮಧ್ಯಾಹ್ನ ಆಗಮಿಸಿದ ಎಲ್ಲರಿಗೂ ಭೋಜನದ ವ್ಯವಸ್ಥೆ ‌ಮಾಡಲಾಗಿತ್ತು.