ಸವಣೂರಿನ ಶಿಲ್ಪಿ ಸವಣೂರು ಕೆ. ಸೀತಾರಾಮರ ರೈ ಸವಣೂರುರವರು ಅಧ್ಯಕ್ಷರಾಗಿರುವ ಪುತ್ತೂರಿನ ದರ್ಬೆಯ ಪ್ರಶಾಂತ್ ಮಹಲಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಆ. 24ರಂದು ಪುತ್ತೂರಿನ ದರ್ಬೆಯ ಪ್ರಶಾಂತ್ ಮಹಲ್ ನ ಸನ್ನಿಧಿ ಹಾಲ್ ನಲ್ಲಿ ನಡೆಯಿತು.
ಕೆ. ಸೀತಾರಾಮ ರೈ ಸವಣೂರುರವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಎನ್. ಸುಂದರ ರೈ, ನಿರ್ದೇಶಕರಾದ ಮಹಾಬಲ ರೈ ಬೋಳಂತೂರು, ಎನ್. ಜಯಪ್ರಕಾಶ್ ರೈ, ಅಶ್ವಿನ್ ಎಲ್. ಶೆಟ್ಟಿ, ಎಸ್.ಎಂ. ಬಾಪು ಸಾಹೇಬ್, ರವೀಂದ್ರನಾಥ ಶೆಟ್ಟಿ ಕೇನ್ಯ, ರಾಮಯ್ಯ ರೈ ಕೆದಂಬಾಡಿ, ಚಿಕ್ಕಪ್ಪ ನಾಯ್ಕ್ ಅರಿಯಡ್ಕ, ಸೀತಾರಾಮ ಶೆಟ್ಟಿ ಬಿ, ವಿ.ವಿ. ನಾರಾಯಣ ಭಟ್, ಮಹಾದೇವ ಎಂ, ಶ್ರೀಮತಿ ಪೂರ್ಣಿಮಾ ಎಸ್.ಆಳ್ವ, ಶ್ರೀಮತಿ ಯಮುನಾ ಎಸ್. ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷರ ಮಾತುಗಳೊಂದಿಗೆ ಮಾತನಾಡಿದ ಕೆ. ಸೀತಾರಾಮ ರೈಯವರು ಆದರ್ಶ ವಿವಿಧೋದ್ದೇಶದ ಸಹಕಾರ ಸಂಘ 2023-24ರಲ್ಲಿ ರೂ. 131.93 ಕೋಟಿ ಠೇವಣಿಯನ್ನು ಸಂಗ್ರಹಿಸಿ, 109.69 ಕೋಟಿಯಷ್ಟು ಸಾಲವಿತರಿಸಿ ರೂ. 736.69 ಕೋಟಿಯಷ್ಟು ದಾಖಲೆಯ ವ್ಯವಹಾರ ನಡೆಸಿ ರೂ. 1.65ಕೋಟಿಯಷ್ಟು ಲಾಭ ಗಳಿಸಿದೆ. ಸದಸ್ಯ ಈ ವರ್ಷ 16% ಡಿವಿಡೆಂಟ್ ನೀಡಲಿದ್ದೇವೆ. ಸಂಘದ ಮುಂದಿನ ಆರ್ಥಿಕ ವರ್ಷದಲ್ಲಿ 2.5ಕೋಟಿ ಲಾಭದ ಗುರಿ ಹೊಂದಿದ್ದು, 18 % ಡಿವಿಡೆಂಟ್ ನೀಡುವ ಯೋಜನೆ ಇದೆ.
ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 14 ಶಾಖೆಗಳನ್ನು ಹೊಂದಿದ್ದು, 2024-25ರಲ್ಲಿ ಮಂಗಳೂರಿನಲ್ಲಿ 15ನೇ ಶಾಖೆಯನ್ನು ತೆರೆಯುವ ಯೋಜನೆಯನ್ನು ಹಾಕಿಕೊಂಡಿದೆ. ಸವಣೂರಿನಲ್ಲಿ ಈಗಾಗಲೇ 0.75 ಸೆಂಟ್ಸ್ ಜಾಗವನ್ನು ರೂ. 1.29 ಕೋಟಿ ವೆಚ್ಚದಲ್ಲಿ ಖರಿದಿ ಮಾಡಿ ಸುಮಾರು 3.25ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಶೇ. 25 ಪ್ರಗತಿಯಲ್ಲಿದೆ. ಸಂಘವು 25 ವರ್ಷ ಪೂರೈಸುವುದರ ಒಳಗೆ ಅಂದರೆ ಮುಂದಿನ 1.5 ವರ್ಷದೊಳಗೆ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ ಎಂದರು.
ಸಂಘದ ಮಹಾ ಪ್ರಬಂಧಕರಾದ ವಸಂತ ಜಾಲಾಡಿ ಆಡಳಿತ ಮಂಡಳಿ ವರದಿ ವಾಚಿಸಿದರು. ಸಹಾಯಕ ಪ್ರಬಂಧಕರಾದ ಸುನಾಜ್ ರಾಜ್ ಶೆಟ್ಟಿ 2024-25ನೇ ಸಾಲಿನ ಅಯವ್ಯಯ ಪಟ್ಟಿಯನ್ನು ವಾಚಿಸಿದರು. ಸಿಬ್ಬಂದಿಗಳಾದ ಶ್ರಮಿತ ಕೆ ಪ್ರಾರ್ಥಿಸಿದರು. ಪ್ರಜ್ಞಾಶ್ರೀ ಸ್ವಾಗತಿಸಿದರು. ಶ್ರೀಮತಿ ರಕ್ಷಾ ಮಹಾಸಭೆಯ ನೋಟೀಸು ಓದಿದರು. ಶ್ರೀಧರ್ ವಂದಿಸಿದರು. ಸಂಘದ 14 ಶಾಖೆಗಳ ಸಿಬ್ಬಂದಿ ವರ್ಗದವರು ಸಹಕರಿಸಿದರು. ಸಂಘದ ಸದಸ್ಯರು ಸಭೆಯಲ್ಲಿ ಹಾಜರಿದ್ದು, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.