ಧರ್ಮಸ್ಥಳ ಯೋಜನೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ದಿನಾಚರಣೆ

0

ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ಸಂಯುಕ್ತ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವು ಆ.23 ರಂದು ನಡೆಯಿತು.

ಜನಜಾಗೃತಿ ವೇದಿಕೆ ಅಧ್ಯಕ್ಷ ಲೋಕನಾಥ್ ಅಮೆಚೂರು ದೀಪ ಪ್ರಜ್ವಲಿಸಿದರು.
ನೆಹರು ಮೆಮೋರಿಯಲ್ ಕಾಲೇಜು ಪ್ರಾಂಶುಪಾಲ ಡಾ| ರುದ್ರಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಸಹಾಯಕ ಪ್ರಾದ್ಯಾಪಕಿ ಡಾ. ಅನುರಾಧ ಕುರುಂಜಿ ಸ್ವಾಸ್ಥ್ಯ ಸಂಕಲ್ಪದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಯೋಜನಾಧಿಕಾರಿ ಮಾಧವ ಗೌಡ, ಜನಜಾಗೃತಿ ವೇದಿಕೆ ವಲಯ ಉಪಾಧ್ಯಕ್ಷ ವಿಶ್ವನಾಥ್ ಶೆಟ್ಟಿ. ಶ್ರೀಮತಿ ರತ್ನಾವತಿ ಡಿ. ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ಮಮತಾ, ಶ್ರೀಮತಿ ಕೃಪಾ ಎ .ಎನ್, ಸೇವಾಪ್ರತಿನಿಧಿ ಸೌಜನ್ಯ ಉಪಸ್ಥಿತರಿದ್ದರು.

ಮೇಲ್ವಿಚಾರಕಿ
ಜಯಶ್ರೀ ಸ್ವಾಗತಿಸಿದರು.
ಗಾನ ಬಿ.ಡಿ ವಂದಿಸಿದರು. ಚೈತನ್ಯ ಪ್ರಭು ನಿರೂಪಿಸಿದರು.