ವೆಂಕಟರಾಮ ಭಟ್ಟರಿಗೆ ಕೀರಿಕ್ಕಾಡು ವನಮಾಲ ಕೇಶವ ಸಾಧನಾ ಪ್ರಶಸ್ತಿ ಘೋಷಣೆ

0

ಹಿರಿಯ ಯಕ್ಷಗಾನ ಅರ್ಥಧಾರಿ ಹಾಗೂ ಬರಹಗಾರರಾದ ವೆಂಕಟರಾಮ ಭಟ್ಟ ಸುಳ್ಯ ಅವರಿಗೆ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ವತಿಯಿಂದ ಕೊಡಮಾಡುವ ಕೀರಿಕ್ಕಾಡು ವನಮಾಲ ಕೇಶವ ಸಾಧನಾ ಪ್ರಶಸ್ತಿ ಘೋಷಿಸಲಾಗಿದೆ.


ಸಂಘದ ಮಾಜಿ ಅಧ್ಯಕ್ಷ ಕೀರಿಕ್ಕಾಡು ವನಮಾಲ ಕೇಶವ ಭಟ್ಟ ಸ್ಮರಣಾರ್ಥ ಈ ಸ್ಮರಣಾರ್ಥ‌ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಶ್ರೀಕೃಷ್ಣ ಜನ್ಮಾಷ್ಟಮಿಯ ವಿಶೇಷ ಕಾರ್ಯಕ್ರಮದ ಪ್ರಯುಕ್ತ ಆ.26ರಂದು ಸಂಜೆ 6.30ಕ್ಕೆ ಸಂಘದ ಕೀರಿಕ್ಕಾಡು ಮಾಸ್ತ‌ರ್ ಸಭಾಭವನದಲ್ಲಿ ನಡೆಯುವ ಕೀರಿಕ್ಕಾಡು ವನಮಾಲ ಕೇಶವ ಭಟ್ಟ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಾರಾಯಣ ನಾಯಕ್ ಊಜಂಪಾಡಿ ಅಧ್ಯಕ್ಷತೆ ವಹಿಸುವರು. ನಾರಾಯಣ ದೇಲಂಪಾಡಿ ಸಂಸ್ಮರಣಾ ಭಾಷಣ ಮಾಡುವರು. ಪ್ರಕಾಶ್ ಮೂಡಿತ್ತಾಯ ಅಭಿನಂದನಾ ಭಾಷಣ ಮಾಡುವರು. ಡಾ.ಸೂರ್ಯನಾರಾಯಣ ಕೆ, ರಾಮಣ್ಣ ಮಾಸ್ತರ್ ದೇಲಂಪಾಡಿ, ಎಂ.ರಮಾನಂದ ರೈ ದೇಲಂಪಾಡಿ ಮತ್ತಿತರರು ಭಾಗವಹಿಸಲಿದ್ದಾರೆ.


ರಾತ್ರಿ 8 ರಿಂದ ಶ್ರೀಕೃಷ್ಣ ಜನನ- ರಾಜಸೂಯ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕಾರ್ಯದರ್ಶಿ ವಿಶ್ವವಿನೋದ ಬನಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.