ಬೆಳ್ಳಾರೆ ಕೆಪಿಎಸ್ ವಸಂತ ಸಂಭ್ರಮ ಆಚರಣಾ ಸಮಿತಿ ಸಭೆ

0

ಬೆಳ್ಳಾರೆ ಕೆ ಪಿ ಎಸ್ ಸಂಸ್ಥೆಯ ಪ್ರಾಥಮಿಕ ವಿಭಾಗ 100 ವಸಂತ, ಪ್ರೌಢ ವಿಭಾಗ 75 ವಸಂತ ಹಾಗೂ ಕಾಲೇಜು ವಿಭಾಗ 50 ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಕೆ.ಪಿ.ಎಸ್ ಬೆಳ್ಳಾರೆ ಸಂಸ್ಥೆಯ ವಸಂತ ಸಂಭ್ರಮ 2024 ಆಚರಣಾ ಸಮಿತಿಯ ಸಭೆಯು ಆ.24 ರಂದು ಕೆಪಿಎಸ್ ನಲ್ಲಿ ವಸಂತ ಸಂಭ್ರಮ ಸಮಿತಿ ಕಾರ್ಯಾಧ್ಯಕ್ಷೆ ಶ್ರೀಮತಿ ರಾಜೀವಿ ಆರ್.ರೈಯವರ ಅಧ್ಯಕ್ಷತೆಯಲ್ಲಿ ನಡೆಯಿತು.


ಮುದ್ರಣ ಸಮಿತಿ ಸಹಸಂಚಾಲಕ ಕೆಪಿಎಸ್ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಗುರು ಮಾಯಿಲಪ್ಪರವರು ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು.
ಮ್ಯಾರಥಾನ್ ಕ್ರೀಡಾಕೂಟ ನಡೆಸುವ ಬಗ್ಗೆ ಚರ್ಚಿಸಲಾಯಿತು.


ರಾಷ್ಟ್ರೀಯ ಕ್ರೀಡಾಪಟು ಸುಬ್ರಹ್ಮಣ್ಯ ಕೆ.ಎಂ.,ಗುತ್ತಿಗಾರಿನ ದೈಹಿಕ ಶಿಕ್ಷಣ ಶಿಕ್ಷಕ ಮಾಯಿಲಪ್ಪ ಗೌಡರವರು ಮ್ಯಾರಥಾನ್ ಕ್ರೀಡಾಕೂಟ ನಡೆಸಲು ಕ್ರೀಡಾಕೂಟವನ್ನು ಯಾವ ರೀತಿ ಸಂಘಟಿಸಬಹುದು ಎಂಬ ಬಗ್ಗೆ ಮಾಹಿತಿ ನೀಡಿದರು.


ಮೂರು ದಿನ ನಡೆಯುವ ಕಾರ್ಯಕ್ರಮಕ್ಕೆ ಆರ್ಥಿಕ ಕ್ರೋಢೀಕರಣ ಮಾಡುವ ಬಗ್ಗೆ ,ಅಂದಾಜು ಬಜೆಟ್ ರೂ.50 ಲಕ್ಷ ವೆಚ್ಚದಲ್ಲಿ ಕಾರ್ಯಕ್ರಮ ನಡೆಸುವ ಬಗ್ಗೆ, ಸ್ಮರಣ ಸಂಚಿಕೆ ,ಸಭಾಂಗಣ,ಪೆಂಡಾಲ್,ಆಮಂತ್ರಣ ಮುದ್ರಣ ಹಾಗೂ ಇತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆ ವಿವಿಧ ಸಮಿತಿಗಳ ಕೆಲಸದ ಬಗ್ಗೆ ಮಾಹಿತಿ ನೀಡಿದರು.


ಸಮಿತಿ ಸಂಚಾಲಕ ಎಸ್.ಎನ್.ಮನ್ಮಥ, ಕೆಪಿಎಸ್ ಎಸ್.ಡಿ.ಎಂ.ಸಿ ಕಾರ್ಯಾಧ್ಯಕ್ಷ ಶ್ರೀನಾಥ ರೈ ಬಾಳಿಲ, ಕೋಶಾಧಿಕಾರಿ ಶ್ರೀಮತಿ ಉಮಾಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವ ಬಗ್ಗೆ ಮಾಹಿತಿ ನೀಡಿದರು.
ಪ್ರಾಂಶುಪಾಲರಾದ ಜನಾರ್ಧನ ಕೆ.ಎನ್.ವಂದಿಸಿದರು.
ಸಭೆಯಲ್ಲಿ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯ.ಸ.ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.