ಪೆರಾಜೆ ಶ್ರೀ ಶಾಸ್ತಾವು ಸನ್ನಿಧಿಯಲ್ಲಿ ಸೋಣ ಶನಿವಾರ ಪ್ರಯುಕ್ತ ವಿಶೇಷ ಪೂಜೆ

0

ಪೆರಾಜೆ ಶ್ರೀ ಶಾಸ್ತಾವು ದೇವರ ಸನ್ನಿಧಿಯಲ್ಲಿ ಸೋಣ ಶನಿವಾರ ಪ್ರಯುಕ್ತ ವಿಶೇಷ ಪೂಜೆಯು ಆ.24ರಂದು ನಡೆಯಿತು.

ಶ್ರಾವಣ ಮಾಸದ ಎರಡನೇ ಶನಿವಾರ ಪ್ರಯುಕ್ತ ಶ್ರೀ ಶಾಸ್ತಾವು ದೇವರಿಗೆ ಮಧ್ಯಾಹ್ನ ಮಹಾಪೂಜೆ, ಭಕ್ತಾದಿಗಳಿಗೆ ಪ್ರಸಾದ ಭೋಜನ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು, ದೇವತಕ್ಕರು, ತಕ್ಕಮುಖ್ಯಸ್ಥರುಗಳು, ಆಡಳಿತ ಮಂಡಳಿಯ ಪದಾಧಿಕಾರಿಗಳು, ಮಾಜಿ ಮೊಕ್ತೇಸರರುಗಳು ಸೇರಿದಂತೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.