ಶಾಂತಿನಗರ :ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಬಾಲಕರ ಮತ್ತು ಬಾಲಕಿಯರ ಫುಟ್ಬಾಲ್ ಪಂದ್ಯಾಟ

0

ಬಾಲಕರ ವಿಭಾಗ: ಸೈಂಟ್ ಜೋಸೆಫ್ ಪ್ರಥಮ, ರೋಟರಿ ದ್ವಿತೀಯ

ಬಾಲಕಿಯರ ವಿಭಾಗ: ರೋಟರಿ ಶಾಲೆ ಪ್ರಥಮ,ಗ್ರೀನ್ ವ್ಯೂ ದ್ವಿತೀಯ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ, ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ, ಹಾಗೂ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಇವರ ಜಂಟಿ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಬಾಲಕರ ಹಾಗೂ ಬಾಲಕಿಯರ ಫುಟ್ಬಾಲ್ ಪಂದ್ಯಾಟ ಡಿ 22 ರಂದು ಶಾಂತಿನಗರ ಶಾಲಾ ಮೈದಾನದಲ್ಲಿ ನಡೆಯಿತು.

ಪಂದ್ಯಾಟದ ಉದ್ಘಾಟನೆಯನ್ನು ಸುಳ್ಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಮತಿ ಆಶಾ ನಾಯಕ್ ನೆರವೇರಿಸಿದರು.

ಸಭಾಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಹಮ್ಮದ್ ನಜೀ‌ರ್ ವಹಿಸಿದ್ದರು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸ್ಥಳೀಯ ಮುಖಂಡರುಗಳಾದ ಗೋಪಾಲಕೃಷ್ಣ ಭಟ್, ದಾಮೋದರ್ ಮಂಚಿ, ಶ್ರೀಮತಿ ಹರ್ಷ ಕರ್ಣಾಕರ್, ಶಿಕ್ಷಕರುಗಳಾದ ಸೂಫಿ ಪೆರಾಜೆ, ಶ್ರೀಮತಿ ಮಮತಾ ಕೆ, ಶ್ರೀಮತಿ ಭವಾನಿ,ಶ್ರೀಮತಿ ಪವಿತ್ರ ಉಪಸ್ಥಿತರಿದ್ದರು. ಶಿಕ್ಷಕರುಗಳಾದ ರಘುನಾಥ ಯು.ಸ್ವಾಗತಿಸಿ ಶ್ರೀಮತಿ ಪಾರ್ವತಿ ವಂದಿಸಿದರು. ಭಾಗ್ಯಶ್ರೀ ಎಸ್ ಎನ್ ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಪಂದ್ಯಾ ಕೂಟದಲ್ಲಿ ಒಟ್ಟು 14 ತಂಡಗಳು ಭಾಗವಹಿಸಿದ್ದು ಬಾಲಕರ ವಿಭಾಗದಿಂದ 12 ತಂಡಗಳು ಬಾಲಕಿಯರ ವಿಭಾಗದಿಂದ 2 ತಂಡಗಳು ಜಿದ್ದಾ ಜಿದ್ದಿನ ಪ್ರದರ್ಶನ ವನ್ನು ನೀಡಿತು. ಸುಳ್ಯದ ಖ್ಯಾತ ಫುಟ್ಬಾಲ್ ಆಟಗಾರರಾದ ಮುನಾಫರ್, ಹೈದರಾಲಿ, ಶಮಲ್ ಇವರು ಪಂದ್ಯಾಟದ ತೀರ್ಪುಗಾರರಾಗಿ ಪಂದ್ಯಾಟವನ್ನು ನಡೆಸಿಕೊಟ್ಟರು.

ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಿತು.ಮುಖ್ಯ ಅತಿಥಿಗಳಾಗಿ ಪೈಚಾರ್ ಕಾರುಣ್ಯ ಚಾರಿಟೇಬಲ್ ಅಧ್ಯಕ್ಷ ಆರ್ ಬಿ ಬಶೀರ್, ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ರಿಫಾಯಿ, ಎಸ್ ಡಿ ಎಮ್ ಸಿ ಯ ಸದಸ್ಯರಾದ ವಿಶ್ವನಾಥ್, ಚರ್ಚ್ ನ ಧರ್ಮ ಗುರುಗಳಾದ ರೆವೆರೆಂಟ್ ವಿಕ್ಟರ್ ಫಾದರ್ ಡಿಸೋಜಾ, ನಿವೃತ್ತ ತಶೀಲ್ದಾರಾದ ಕೃಷ್ಣಪ್ಪ ನಾಯ್ಕ,ಎಸ್ ಡಿ ಎಂ ಸಿ ಅಧ್ಯಕ್ಷ ನಜೀರ್ ಮೊದಲದವರು ಸಮಾರಂಭದಲ್ಲಿ ಉಪಸ್ಥಿತರಿದ್ದು ವಿಜೇತರಿಗೆ ಟ್ರೋಫಿ ಗಳನ್ನು ಹಸ್ತಾಂತರಿಸಿದರು.

ಕೊನೆಯದಾಗಿ ಉತ್ತಮ ಪ್ರಧರ್ಶನ ನೀಡಿದ ಸುಳ್ಯ ಸೈಂಟ್ ಜೋಸೆಫ್ ಶಾಲಾ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದು,ರೋಟರಿ ಶಾಲಾ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕ್ಕೊಂಡರು.

ಬಾಲಕಿಯರ ವಿಭಾಗದಲ್ಲಿ ರೋಟರಿ ಶಾಲಾ ವಿದ್ಯಾರ್ಥಿನಿಯರು ಪ್ರಥಮ ಸ್ಥಾನವನ್ನು ಪಡೆದರೆ ಗ್ರೀನ್ ವ್ಯೂ ಶಾಲಾ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.

ಕಾರ್ಯಕ್ರಮದ ಯಶಸ್ವಿಗೆ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಸ್ಥಳೀಯರು ಸಹಕರಿಸಿದರು.