ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 36ನೇ ವರ್ಷದ ಗಣೇಶೋತ್ಸವವು ಸೆ 7ರಿಂದ 9ರ ವರೆಗೆ ಕಲ್ಲುಗುಂಡಿಯ ಶ್ರೀ ರಾಮಕೃಷ್ಣ ಭಜನಾ ಮಂದಿರದಲ್ಲಿ ನಡೆಯಲಿದೆ.
ಸೆ. 7ರಂದು ಬೆಳಿಗ್ಗೆ ಗಣಪತಿ ಹವನ, ವಿಗ್ರಹ ಪ್ರತಿಷ್ಠಾಪನೆ, ಪೂರ್ವಾಹ್ನ ವಿವಿಧ ಆಟೋಟ ಸ್ಪರ್ಧೆಗಳು, ಸಾಹಿತ್ಯ, ಭಕ್ತಿಗೀತೆ ಸ್ಪರ್ಧೆ, ಮಹಾಪೂಜೆ ನಡೆಯಲಿದೆ.
ಸಂಜೆ ಭಜನೆ, ಬಳಿಕ ರಂಗಮಯೂರಿ ಕಲಾ ಶಾಲೆಯ ಕಲಾವಿದರಿಂದ ಗಾನ ನೃತ್ಯ ವೈಭವ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸೆ.8ರಂದು ಸಾವರ್ಜನಿಕ ಕ್ರೀಡಾ ಸ್ಪರ್ಧೆ, ಮಹಾಪೂಜೆ, ಬಹುಮಾನ ವಿತರಣೆ, ಹಾಗೂ ರಾತ್ರಿ ಬಂಗಾರ್ ಕಲಾವಿದರ್ ಪುತ್ತೂರು ಇದರ ” ಕುಡ ಒಂಜಾಕ” ತುಳು ಹಾಸ್ಯಮಯ ಸಾಮಾಜಿಕ ನಾಟಕ ನಡೆಯಲಿದೆ. ಸೆ.9ರಂದು ಬೆಳಿಗ್ಗೆ ಹಾಗೂ ಮಧ್ಯಾಹ್ನ ದೇವರಿಗೆ ಮಹಾಪೂಜೆ ಅಪರಾಹ್ನ ಕಲ್ಲುಗುಂಡಿಯ ಮುಖ್ಯ ಪೇಟೆಯಲ್ಲಿ ಪುಷ್ಪಾಲಂಕೃತ ಭವ್ಯ ರಥದಲ್ಲಿ ಶ್ರೀ ಗಣಪತಿ ಮೂರ್ತಿಯ ಶೋಭಾಯಾತ್ರೆಯು ಸಾಗಿ ಬಂದು ಕೂಲಿಶೆಡ್ಡಿನ ಪಯಸ್ವಿನಿ ನದಿಯಲ್ಲಿ ಜಲಸ್ತಂಭನ ನಡೆಯಲಿದೆ.