ಪೇರಾಲು ಶಾಲೆಯ ವಿದ್ಯಾರ್ಥಿಗಳಿಗೆ ಇನ್ನರ್ ವೀಲ್ ಕ್ಲಬ್ ಸುಳ್ಯ ವತಿಯಿಂದ ಗುರುತಿನ ಚೀಟಿ ಕೊಡುಗೆ

0

ಸರಕಾರಿ ಉನ್ನತೀಕರಿಸಿದ ಕಿರಿಯ ಪ್ರಾಥಮಿಕ ಶಾಲೆ ಪೇರಾಲು ಇಲ್ಲಿಯ ವಿದ್ಯಾರ್ಥಿಗಳಿಗೆ ಇನ್ನರ್ ವೀಲ್ ಕ್ಲಬ್ ಸುಳ್ಯ ಇದರ ವತಿಯಿಂದ ಗುರುತಿನ ಚೀಟಿ ಕೊಡುಗೆಯಾಗಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆ ಶ್ರೀಮತಿ ಚಿಂತನಾ ಸುಬ್ರಹ್ಮಣ್ಯ, ಕಾರ್ಯದರ್ಶಿಯಾದ ಶ್ರೀಮತಿ ಸವಿತಾ ಹೊದ್ದೆಟ್ಟಿ, ಖಜಾಂಚಿಯಾದ ಡಾ. ಸ್ಮಿತಾ ಹರ್ಷವರ್ಧನ್, ಸದಸ್ಯರಾದ ಶ್ರೀಮತಿ ಶ್ರೀಪ್ರಿಯಾ ರವರು ಉಪಸ್ಥಿತರಿದ್ದರು.


ಶಾಲೆಯ ಮುಖ್ಯ ಶಿಕ್ಷಕರು ಶ್ರೀಮತಿ ಶಿಲ್ಪಾ ಗಾಣಿಗ ಸ್ವಾಗತಿಸಿದರು. ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ಯನ್ನು ವಿತರಿಸಿ ಶ್ರೀಮತಿ ಚಿಂತನಾ ಸುಬ್ರಹ್ಮಣ್ಯ ಅನಿಸಿಕೆ ವ್ಯಕ್ತಪಡಿಸಿದರು.

ಎಸ್ ಡಿ ಎಂ ಸಿ ಅಧ್ಯಕ್ಷ ಮೋಹನದಾಸ್ ಕುಕ್ಕುಡೇಲು ಕೃತಜ್ಞತಾ ಪತ್ರ ಹಸ್ತಾಂತರಿಸಿದರು.

ಶಿಕ್ಷಕರಾದ ವೆಂಕಟರಾಜು ವಂದಿಸಿ, ಶಿಕ್ಷಕಿ ಶ್ರೀಮತಿ ಲತಾಶ್ರೀ ಕಾರ್ಯಕ್ರಮ ನಿರೂಪಿಸಿದರು.