ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇದರ ಆಶ್ರಯದಲ್ಲಿ ಸುಳ್ಯ ತಾಲೂಕು ದಸರಾ ಕ್ರೀಡಾಕೂಟವು ಸೆ.22ರಂದು ಸ.ಪ್ರೌ.ಶಾಲಾ ಕ್ರೀಡಾಂಗಣ ಮರ್ಕಂಜದಲ್ಲಿ ನಡೆಯಲಿದೆ.
ಶಾಸಕಿ ಭಾಗೀರಥಿ ಮುರುಳ್ಯರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಶಾಸ್ತಾವು ಯುವಕ ಮಂಡಲ ರೆಂಜಾಳ ಇವರ ಸಾರಥ್ಯದಲ್ಲಿ ಕ್ರೀಡಾಕೂಟ ಆಯೋಜನೆಗೊಳ್ಳಲಿದೆ.
ಸೆ. 22 ನಡೆಯುವ ಸ್ಪರ್ಧೆಗಳು : ಪುರುಷರಿಗೆ ಮತ್ತು ಮಹಿಳೆಯರಿಗೆ * ಕಬಡ್ಡಿ * ಖೋ-ಖೋ ವಾಲಿಬಾಲ್ * ತ್ರೋಬಾಲ್ ಅಥ್ಲೆಟಿಕ್ಸ್ (100ಮೀ.. 200, 400, 800, 1,500.. 5,000. ( ಮಾತ್ರ), (3,000ಮೀ ಮಹಿಳೆಯರಿಗೆ ಮಾತ್ರ), ಶಾಟ್‌ಪುಟ್, ಉದ್ದ ಜಿಗಿತ, ಎತ್ತರ ಜಿಗಿತ, ಮತ್ತು 4*100ಮೀ ರಿಲೇ
ವಿಶೇಷ ಸೂಚನೆ: ಸೆ.22 ರಂದು ಪಂದ್ಯಾಟದ ಉದ್ಘಾಟನೆಯ ಮುಂಚಿತವಾಗಿ ಎಲ್ಲಾ ಸ್ಪರ್ಧೆಗಳು ಪ್ರಾರಂಭವಾಗಲಿದೆ. ಬೆಳಿಗ್ಗೆ 8.30ಕ್ಕೆ ಪುರುಷರ ವಿಭಾಗದ 5000 ಮೀ. ಓಟ ಮತ್ತು ಮಹಿಳೆಯರ ವಿಭಾಗದ 3000 ಮೀ ಓಟ ಸ್ಪರ್ಧೆಗಳು ನಡೆಯಲಿರುವುದು ಹಾಗೂ ಇತರ ವೈಯುಕ್ತಿಕ ಕ್ರೀಡಾ ಸ್ಪರ್ಧೆಗಳು ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ನಡೆಯಲಿರುವುದು, ಪಂದ್ಯ ಆದುದರಿಂದ ಎಲ್ಲಾ ಸ್ಪರ್ಧಿಗಳು ಬೆಳಿಗ್ಗೆ 8.30 ಗಂಟೆಗೆ ಸರಿಯಾಗಿ ಕ್ರೀಡಾಂಗಣದಲ್ಲಿ ಹಾಜರಿರುವುದು. ಭಾಗವಹಿಸುವವರು ಸ್ಥಳದಲ್ಲೇ ನೋಂದಾಯಿಸುವುದು.
- ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಸುಳ್ಯ ತಾಲೂಕಿನವರು ಮಾತ್ರ ಅರ್ಹತೆ ಹೊಂದಿರುತ್ತಾರೆ.* ಗುಂಪಾಟದಲ್ಲಿ ಭಾಗವಹಿಸುವ ತಂಡದವರು 9.30ರ ಗಂಟೆಯ ಒಳಗಾಗಿ ಸ್ಥಳದಲ್ಲಿ ವರದಿ ಮಾಡಿಕೊಳ್ಳತಕ್ಕದ್ದು. 10.00 ಗಂಟೆಗೆ ಸರಿಯಾಗಿ ತಳುಕು ಹಾಕುವುದರಿಂದ ನಂತರ ಬಂದ ಯಾವುದೇ ತಂಡದವರಿಗೆ ಭಾಗವಹಿಸಲು ಅವಕಾಶವಿರುವುದರಿಲ್ಲ.
ಪುರುಷರಿಗೆ ಮಾತ್ರ : ಪುರುಷರ ವಿಭಾಗದ ಪುಟ್‌ಬಾಲ್ ಪಂದ್ಯಾಟವನ್ನು ದಿನಾಂಕ ಸೆ.೨೨ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲಬೈಲು ಕ್ರೀಡಾಂಗಣದಲ್ಲಿ ನಡೆಸಲಾಗುವುದು.
ನೇರವಾಗಿ ಜಿಲ್ಲಾ ಮಟ್ಟದಲ್ಲಿ ನಡೆಯುವ ಸ್ಪರ್ಧೆಗಳು: ಬಾಸ್ಕೆಟ್‌ಬಾಲ್, ಕುಸ್ತಿ, ಬ್ಯಾಡ್ಮಿಂಟನ್, ಹಾಕಿ, ಹ್ಯಾಂಡ್‌ಬಾಲ್, ಯೋಗ ಸ್ಪರ್ಧೆ ಟೇಬಲ್ ಟೆನ್ನಿಸ್, ಬಾಲ್ ಬ್ಯಾಡ್ಮಿಂಟನ್, ಹರ್ಡಲ್ಸ್ – ಜಿಲ್ಲಾ ಆಯ್ಕೆ ಮಾಡಬೇಕಾಗದ ಸ್ಪರ್ಧೆಗಳು: ಟೆನ್ನಿಸ್, ನೆಟ್‌ಬಾಲ್, ಈಜು.