ಪಂಜ ಲಯನ್ಸ್ ಕ್ಲಬ್ ವತಿಯಿಂದ ಓಣಂ ಹಬ್ಬ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮ

0

ಪಂಜ ಲಯನ್ಸ್ ಕ್ಲಬ್ ವತಿಯಿಂದ ಓಣಂ ಹಬ್ಬ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮ ಲಯನ್ಸ್ ಭವನದಲ್ಲಿ ಆಚರಿಸಲಾಯಿತು. ಲಯನ್ಸ್ ಜಿಲ್ಲಾ GLT ಮುಖ್ಯ ಸಂಯೋಜಕ ಪಿ ವಿ ಅನಿಲ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಸುಬ್ರಹ್ಮಣ್ಯ ಸುಬ್ರಹ್ಮಣ್ಯಶ್ವರ ಪದವಿ ಪೂರ್ವ ಕಾಲೇಜು ಉಪನ್ಯಾಸಕ ರೋ.ಜಯಪ್ರಕಾಶ್ ಆರ್ ಓಣಂ ಹಬ್ಬದ ಪೌರಾಣಿಕ ಹಿನ್ನಲೆ ಮತ್ತು ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿಧರ್ಪ ಳಂಗಾಯ ಸಭಾಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ಸಂಯೋಜಕ ಮತ್ತು ಪ್ರಾಯೋಜಕ ಮನು ತೊಂಡಚ್ಚನ್ , ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು, ಕಾರ್ಯದರ್ಶಿ ಮೋಹನ್ ದಾಸ್ ಕೂಟಾಜೆ, ಕೋಶಾಧಿಕಾರಿ ಸುರೇಶ್ ಕುಮಾರ್ ನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ಆಶಾ ಮನು ಸ್ವಾಗತಿಸಿದರು .ಕಾರ್ಯದರ್ಶಿ ಮೋಹನ್ ದಾಸ್ ಕೂಟಾಜೆ ವಂದಿಸಿದರು.

ಬಳಿಕ ಸಹಭೋಜನ ಕಾರ್ಯಕ್ರಮದಲ್ಲಿ 24ವಿವಿಧ ಖಾದ್ಯಗಳನ್ನು ಮನು ಪಂಜ ಮತ್ತು ಶ್ರೀಮತಿ ಆಶಾ ಮನು ವ್ಯವಸ್ಥೆ ಮಾಡಿದ್ದರು. ಲಯನ್ಸ್ ಕ್ಲಬ್ ನ ಸರ್ವ ಸದಸ್ಯರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದರು.