ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಕ್ಕಳ ಮಂತ್ರಿಮಂಡಲದ ಅಧಿವೇಶನ

0

ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಕ್ಕಳ ಮಂತ್ರಿಮಂಡಲದ ಅಧಿವೇಶನವು ಸೆ.18 ರಂದು ನಡೆಯಿತು. ಅಧಿವೇಶನದಲ್ಲಿ ಶಾಲಾ ವಿದ್ಯಾರ್ಥಿ ನಾಯಕ ಲಕ್ಷ್ಯಜಿತ್ ಜಿ ರೈ, ಉಪನಾಯಕಿ ಸಾನ್ವಿ ಎ ಜೆ, ಸ್ಪೀಕರ್ ಹಿಷಾ ಹರ್ಷ, ಗವರ್ನರ್ ಸಂಜ್ಞಾ ಎ, ಸೆಕ್ರೆಟರಿ ವೈಭವ್ ಕೆ ವಿ , ವಿರೋಧ ಪಕ್ಷದ ನಾಯಕ ಶಯನ್ ಅಬ್ದುಲ್ಲಾ ಹಾಗೂ ಎಲ್ಲಾ ಮಂತ್ರಿ ಮಂಡಲ ದ ವಿದ್ಯಾರ್ಥಿಗಳು ಹಾಜರಿದ್ದರು. ರಾಷ್ಟ್ರಗೀತೆಯೊಂದಿಗೆ ಅಣಕು ಸಂಸತ್ತಿನ ಕಾರ್ಯಕಲಾಪ ಪ್ರಾರಂಭಗೊಂಡಿತು. ಶಾಲಾ ನಾಯಕ ಮಂತ್ರಿಮಂಡಲದ ವರದಿಯನ್ನು ವಾಚಿಸಿದನು. ತದನಂತರ ಶಿಕ್ಷಕಿ ಶ್ರೀಮತಿ ಶೋಭಾರವರು ಅಣಕು ಸಂಸತ್ತಿನಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿಸಿದರು.


ಮುಂದೆ ಚರ್ಚಾ ಅವಧಿಯಲ್ಲಿ ಶಾಲಾ ಶಿಸ್ತು ಪಾಲನೆಯಲ್ಲಿ ಮಂತ್ರಿಮಂಡಲದ ಪಾತ್ರ ಎನ್ನುವ ವಿಷಯದ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ,5 ನೇ ತರಗತಿಯಿಂದ 7 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು.
ಏಳನೇ ತರಗತಿಯ ಪ್ರೀತನ್ ವಿನ್ಸ್ ಡಿಸೋಜ ಸ್ವಾಗತಿಸಿ ,ಆರನೇ ತರಗತಿಯ ಜಾಹ್ನವಿ ವಂದಿಸಿ, ಶಿಕ್ಷಕಿ ಶ್ರೀಮತಿ ಯಶ್ವಿತ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.