ಪರಿವಾರಕಾನ ಬಳಿ ಎರಡು ಕಾರುಗಳು ಪರಸ್ಪರ ಡಿಕ್ಕಿ

0

ಸುಳ್ಯ ಪರಿವಾರಕಾನದ ಉಡುಪಿ ಗಾರ್ಡನ್ ಬಳಿ ಎರಡು ಕಾರುಗಳು ಪರಸ್ಪರ ಡಿಕ್ಕಿ ಸಂಭವಿಸಿ ನಿಯಂತ್ರಣ ತಪ್ಪಿದ ಅಲ್ಟೋ ಕಾರು ರಸ್ತೆ ಬದಿಯ ಚರಂಡಿಗೆ ಪಲ್ಟಿ ಯಾದ ಘಟನೆ ಇದೀಗ ವರದಿಯಾಗಿದೆ.

ಸುಳ್ಯದಿಂದ ಪರಿವಾರಕಾನದ ಬಳಿ ಇರುವ ಕಾರ್ ಗ್ಯಾರೇಜ್ ಗೆ ಹೋಗುತ್ತಿದ್ದ ಆಲ್ಟೊ ಕಾರು ಮುಖ್ಯ ರಸ್ತೆಯಿಂದ ಗ್ಯಾರೇಜ್ ಕಡೆಗೆ ತಿರುಗಿದಾಗ ಮಡಿಕೇರಿ ಕಡೆಯಿಂದ ಬರುತ್ತಿದ್ದ ಮತ್ತೊಂದು ಕಾರು ಈ ಕಾರಿನ ಹಿಂಭದಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಈ ವೇಳೆ ನಿಯಂತ್ರಣ ತಪ್ಪಿದ ಆಲ್ಟೊ ಕಾರು ಪಲ್ಟಿಯಾಗಿ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ ಎಂದು ತಿಳಿದು ಬಂದಿದೆ.

ಘಟನೆಯಿಂದ ಆಲ್ಟೊ ಕಾರು ಹೆಚ್ಚು ಜಖಂ ಗೊಂಡಿದ್ದು ಮತ್ತೊಂದು ಕಾರಿಗೆ ಅಲ್ಪ ಜಖಂ ಉಂಟಾಗಿದೆ.

ಆಲ್ಟೊ ಕಾರಿನಲ್ಲಿ ತಂದೆ ಮತ್ತು ಮಗಳು ಇದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.