ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ
ಸಂಪಾಜೆ ವಲಯ ಭಾರತೀಯ ತೀಯ ಸಮಾಜ ವಾರ್ಷಿಕ ಸಭೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ , ಸನ್ಮಾನ ಕಾರ್ಯಕ್ರಮವು ಕಲ್ಲುಗುಂಡಿ ಶ್ರೀ ಮಹಾವಿಷ್ಣು ಮೂರ್ತಿ ಒತ್ತೆಕೋಲ ಗದ್ದೆಯ ಸಭಾಂಗಣದಲ್ಲಿ ಸೆ. 22 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ತೀಯ ಸಮಾಜದ ಅಧ್ಯಕ್ಷ ಶ್ರೀಧರ್ ಕೆ.ಕೆ ದೀಪ ಬೆಳಗಿಸಿ ಉದ್ಘಾಟಿಸಿ ತೀಯ ಸಮಾಜದ ಸ್ಥಾಪನೆಯ ಬೆಳವಣಿಗೆಯಲ್ಲಿ ತೊಡಗಿಸಿ ಸಮಾಜವನ್ನು ಅಗಲಿದವರಿಗೆ ಒಂದು ನಿಮಿಷ ಮೌನ ಪ್ರಾರ್ಥನೆ ನಡೆಸಲಾಯಿತು.
ಬಳಿಕ ಮಾತನಾಡಿದ ಅಧ್ಯಕ್ಷರು ತೀಯ ಸಮಾಜ ಬೆಳೆದು ಬಂದ ರೀತಿ ಹಾಗೂ ಇಂದಿನ ಕಾಲದಲ್ಲಿ ಸಮಾಜ ಬೆಳವಣಿಗೆ, ಸಹಕಾರ ಮತ್ತು ಒಗ್ಗಟ್ಟು , ಹಾಗೂ ಮುಂದಿನ ದಿನಗಳಲ್ಲಿ ಸಮುದಾಯದಲ್ಲಿ ಆಗಬೇಕಾದ ಅಭಿವೃದ್ಧಿಯ ಬಗ್ಗೆ ಹೇಳಿದರು.
ಬಳಿಕ 2023 ಮತ್ತು 24 ನೇ ಸಾಲಿನಲ್ಲಿ ಎಸ್ . ಎಸ್. ಎಲ್. ಸಿ , ಮತ್ತು ಪಿಯುಸಿಯಲ್ಲಿ 500 ಕ್ಕಿಂತ ಹೆಚ್ಚುವರಿ ಅಂಕ ಪಡೆದು ಸಾಧನೆಗೈದ ಸಮುದಾಯದ ವಿದ್ಯಾರ್ಥಿಗಳಾದ ಧನುಶ್ರೀ ಗೂನಡ್ಕ , ಜಶ್ಮಿತಾ ಚಟ್ಟೆಕಲ್ಲು, ಮೋಕ್ವಾ ಚಟ್ಟೆ ಕಲ್ಲು, ಕ್ಷಮಾ ಚಟ್ಟೆ ಕಲ್ಲು , ವರ್ಷ ಉoಬಾಳೆ, ಚಸ್ಮಿತಾ ಕೊಯನಾಡು ಗುಡ್ಡೆಗದ್ದೆ, ಅವರಿಗೆ ಶಾಲು ಹೊದಿಸಿ , ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಬಳಿಕ ಭಾರತೀಯ ತೀಯ ಸಂಪಾಜೆ ವಲಯ ಯುವಕರ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಉದಯ ಬೆಲ್ಚಪ್ಪಾಡ ಕೈಪಡ್ಕ, , ಖಾಜಾಂಜಿ ಶ್ರೀಜಾ ಚಟ್ಟೆಕಲ್ಲು,ಮಾಜಿಗೌರವಾಧ್ಯಕ್ಷ ಜನಾರ್ಧನ ಕಡೆಪಾಲ, ಕಾರ್ಯದರ್ಶಿ ಗಣೇಶ್ ಕಡೆ ಪಾಲ, ಮಾಜಿ ಗ್ರಾಂ. ಪಂ ಅಧ್ಯಕ್ಷೆ ಸುಂದರಿ ಮುಂಡಡ್ಕ, ಜೊತೆ ಕಾರ್ಯದರ್ಶಿ ವೇಣು ಉಂಬಳೆ , ಮಾಜಿ ಅಧ್ಯಕ್ಷ ಯೋಗೀಶ್ ದಂಡೆಕಜೆ, ರಾಘವೇಂದ್ರ ಬೇಕರಿ ಮಾಲೀಕ ಸುನಿಲ್, ಅನಿಲ್ ಸುಳ್ಯ ಕೋಡಿ , ಹಾಗೂ ಪದಾಧಿಕಾರಿಗಳು , ಸರ್ವ ಸದಸ್ಯರು ಉಪಸ್ಥಿರಿದ್ದರು.
ಅಖಿಲೇಶ್ ಈಶ್ವರ ಮಂಗಲ ಸ್ವಾಗತಿಸಿ ವಂದಿಸಿದರು.