ಗಾಂಧಿ ಜಯಂತಿ ಅಂಗವಾಗಿ ಸುಳ್ಯ ಅಮರ ಸಂಘಟನಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

0

ಒಂದು ಹೆಜ್ಜೆ ಉತ್ತಮ ಸಮಾಜಕ್ಕಾಗಿ ಎಂಬ ದ್ವೇಯದಡಿಯಲ್ಲಿ ಸುಳ್ಯ ಅಮರ ಸಂಘಟನಾ ಸಮಿತಿ ರಿ, ನಗರ ಪಂಚಾಯರ್ ಸುಳ್ಯ, ತಾಲ್ಲೂಕು ಕಛೇರಿ, ತಾಲೂಕು ಪಂಚಾಯತ್ ಸುಳ್ಯ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುಳ್ಯ,ಅರಕ್ಷಕ ಠಾಣೆ ಸುಳ್ಯ, ಆರೋಗ್ಯಾಧಿಕಾರಿ ಮತ್ತು ಸಿಬ್ಬಂದಿಗಳು, ಸಾಮಾಜಿಕ ಅರಣ್ಯ ವಲಯ ಸುಳ್ಯ,ವಕೀಲರ ಸಂಘ ಸುಳ್ಯ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು & ಆಸ್ಪತ್ರೆ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಸುಳ್ಳ,ಸರಕಾರಿ ಪ್ರಥಮ ದರ್ಜೆ ಕಾಲೇಜು, ತಾಲೂಕು ಸರಕಾರಿ ಅಧಿಕಾರಿಗಳ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ನ 2 ರಂದು ನಡೆಯಿತು.

ಜ್ಯೋತಿ ವೃತ್ತದ ಬಳಿ ಸುಳ್ಯ ತಹಶೀಲ್ದಾರ್ ಅರವಿಂದ್ ಕೆ ಎಂ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿ ಸ್ವಚ್ಛತೆ ಕೇವಲ ಒಂದು ದಿನಕ್ಕೆ ಮಾತ್ರವೆಂದು ಸೀಮಿತ ಗೊಳಿಸದೆ ಪ್ರತಿದಿನ ಆಚರಣೆ ಮಾಡುವಂತೆ ಇರಬೇಕು.ಇದರಿಂದ ಸಮಾಜ ಮತ್ತು ಪರಿಸರ ಎಂದಿಗೂ ಸ್ವಚ್ಛವಾಗಿರಲು ಸಾಧ್ಯ ಎಂದರು.

ಅಧ್ಯಕ್ಷತೆಯನ್ನು ಅಮರ ಸಂಘಟನಾ ಸಮಿತಿ (ರಿ.) ಅಧ್ಯಕ್ಷ ಸ್ವಾತಿಕ್ ಮಡಪ್ಪಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನ ಪಂ ಮುಖ್ಯಾಧಿಕಾರಿ ಎಂ. ಹೆಚ್. ಸುಧಾಕರ್, ಸುಳ್ಯ ತಾಲೂಕು ಆರೋಗ್ಯ ಅಧಿಕಾರಿ ಡಾ. ನಂದಕುಮಾರ್,ಸುಳ್ಯ ವಕೀಲರ ಸಂಘದ ಕಾರ್ಯದರ್ಶಿ ಜಗದೀಶ್ ಡಿ. ಪಿ, ಸಾಮಾಜಿಕ ಅರಣ್ಯ ಉಪ ವಲಯ ಅರಣ್ಯಾಧಿಕಾರಿ ವಿ ಎಚ್ ಕರಣಿ ಮಠ,ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲಸತೀಶ್ ಕೊಯಿಂಗಾಜೆ, ಸುಳ್ಯ ರೊ. ಪಿಪಿ ಪಿಹೆಚ್‌ಎಫ್ ಪ್ರಭಾಕರನ್ ನಾಯರ್, ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರಾಂಶುಪಾಲರು ಶ್ರೀಮತಿ ಶೋಭಾ ಬೊಮ್ಮೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಸ್ವಚ್ಛತೆ ಕಾರ್ಯ ಜ್ಯೋತಿ ವೃತ್ತದಿಂದ ಪ್ರಾರಂಭವಾಗಿ ಗಾಂಧಿನಗರದವರೆಗೆ ಸಾಗಿ ನಂತರ ಎ.ಪಿ.ಎಂ.ಸಿ ವಠಾರದಲ್ಲಿ ಸಮಾಪ್ತಿ ಗೊಂಡಿತು.

ಸ್ವಚ್ಛ ಸೇವಾ ಕಾರ್ಯಕ್ಕೆ ವಿದ್ಯಾರ್ಥಿಗಳೊಂದಿಗೆ ಸಾರ್ವಜನಿಕರು, ಅಧಿಕಾರಿಗಳು, ಶಾಲಾ ಶಿಕ್ಷಕರು, ಉಪನ್ಯಾಸಕರು ಕೈ ಜೋಡಿಸಿದರು.

ಅಮರ ಸಂಘಟನಾ ಸಮಿತಿ ಪದಾಧಿಕಾರಿಗಳು ಸದಸ್ಯರು ಗಳು ಸಹಕಾರಿಸಿದರು.
ಸಂಘಟನೆ ವತಿಯಿಂದ ಗಣ್ಯರುಗಳಿಗೆ ಗಿಡಗನ್ನು ನೀಡಿ ಗೌರವಿಸಿದರು.

ಶ್ರೀಮತಿ ನಳಿನಾಕ್ಷಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ಸಂಘದ ಪದಾಧಿಕಾರಿಗಳಾದ ಜಯಪ್ರಕಾಶ್ ಸಂಕೇಶ್ ಸ್ವಾಗತಿಸಿ ಪ್ರದೀಪ್ ಬೊಳ್ಳೂರು ವಂದಿಸಿದರು.