ವಿಘ್ನೇಶ ಇಲೆಕ್ಟ್ರಿಕಲ್ಸ್ ಶ್ರೀದೇವಿ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ

0

ಸುಳ್ಯದಲ್ಲಿ ಕಳೆದ 12 ವರ್ಷಗಳಿಂದ ವ್ಯವಹರಿಸುತ್ತಿರುವ ಮಹೇಶ್ ಅಟ್ಲೂರು ರವರ ಮಾಲಕತ್ವದ ಶ್ರೀ ವಿಘ್ನೇಶ ಇಲೆಕ್ಟ್ರಿಕಲ್ಸ್ ರಥಬೀದಿಯಲ್ಲಿರುವ ಶ್ರೀದೇವಿ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು
ಅ.4 ರಂದು ಶುಭಾರಂಭ ಗೊಂಡಿತು.

ಅರ್ಚಕ ದಿವಿದೇಶ್ ಕೆದಿಲಾಯ ರವರ ನೇತೃತ್ವದಲ್ಲಿ ಬೆಳಗ್ಗೆ ಗಣಪತಿ ಹವನವು ನೆರವೇರಿತು.
ಮಾಲಕರ ತಂದೆ ಬಾಲಕೃಷ್ಣ ಭಟ್ ಅಟ್ಲೂರು ಮತ್ತು ತಾಯಿ ಶ್ರೀಮತಿ ಉಷಾ ರವರು ದೀಪ ಪ್ರಜ್ವಲಿಸಿದರು.


ಈ ಸಂದರ್ಭದಲ್ಲಿ ಕಾಂಪ್ಲೆಕ್ಸ್ ‌ಮಾಲಕ ಗೋಪಾಲಕೃಷ್ಣ ಕೆ.ಎಸ್, ಸತೀಶ್ ಕೆ.ಜಿ‌ ಹಾಗೂ
ಸತೀಶ್ ಆಚಾರ್ಯ, ವೆಂಕಟೇಶ್ ಆಚಾರ್ಯ, ರೂಪೇಶ್ ಕೆರೆಮೂಲೆ, ಶಶಿಧರ ಕೇರ್ಪಳ, ಗಗನ್ ಬೈಪಡಿತ್ತಾಯ ಆಲೆಟ್ಟಿ, ಚಂದ್ರಶೇಖರ ಐವರ್ನಾಡು, ಸಾನ್ವಿ ಅಟ್ಲೂರು ಹಾಗೂ ಬಂಧು ಮಿತ್ರರು ಆಗಮಿಸಿ ಶುಭ ಹಾರೈಸಿದರು.
ಎಲ್ಲಾ ತರದ ಇಲೆಕ್ಟ್ರಿಕಲ್ ಐಟಂಗಳನ್ನು ಕ್ಲಪ್ತ ಸಮಯದಲ್ಲಿ ರಿಪೇರಿ ಮಾಡಿಕೊಡಲಾಗುವುದು ಹಾಗೂ ಎಲ್ಲಾ ತರದ ಇಲೆಕ್ಟ್ರಿಕಲ್ ಸಾಮಾಗ್ರಿಗಳು ಲಭ್ಯವಿರುವುದಾಗಿ ಮಾಲಕರು ತಿಳಿಸಿದರು.