ತೊಡಿಕಾನ ಕ್ಷೇತ್ರದ ದೈವ – ದೇವರ ಸಾಕ್ಷಿಯಾಗಿ ನಾನು ಯಾರನ್ನೂ ಜಾತಿ ನಿಂದನೆ ಮಾಡಿಲ್ಲ

0

ವೆಬ್ ಸೈಟೊಂದರಲ್ಲಿ ಆಧಾರರಹಿತ ವರದಿ ಮಾಡಲಾಗಿದೆ : ತೀರ್ಥರಾಮ ಪರ್ನೋಜಿ ಪತ್ರಿಕಾಗೋಷ್ಠಿ

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಟಿ ಮಾಡುವಾಗ ನಾನು ಜಾತಿ ನಿಂದನೆ ಮಾಡಿದ್ದೇನೆಂದು ವೆಬ್ ಸೈಟೊಂದು ಆಧಾರರಹಿತವಾಗಿ ವರದಿ ಮಾಡಿದೆ. ನಾನು ಯಾರ ಜಾತಿ ನಿಂದನೆಯನ್ನೂ ಮಾಡಿಲ್ಲ ” ಎಂದು ಅರಂತೋಡಿನ ತೀರ್ಥರಾಮ ಉಳುವಾರು ಪರ್ನೋಜಿ ಅವರು ಅ.4ರಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.

” ಕಳೆದ ಸೆ.25ರಂದು ತೊಡಿಕಾನ ದೇವಸ್ಥಾನದ ವ್ಯವಸ್ಥಾಪನ ಸಮಿಗೆ ಸಂಬಂಧಿಸಿ ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದೆ. ಅದರಲ್ಲಿ ಮಾತನಾಡುವ ವೇಳೆ ನಾನು ದೇವಸ್ಥಾನಕ್ಕೆ ಅಪ್ಲಿಕೇಶನ್ ಹಾಕಿದವರ ಹೆಸರನ್ನು ಓದಿ ಹೇಳಿದ್ದೆ. ಆಗ ಆಲೆಟ್ಟಿ ಕುಡೆಕಲ್ಲು ರತ್ನಾಕರ ಅವರ ಹೆಸರು ಹೇಳಿದ ಮೇಲೆ ಸತ್ಯಪ್ರಸಾದ್ ನಾಯಕ್ ಎಂದು ಹೇಳಿದ್ದೆ. ಆಗ ನನ್ನ ಜೊತೆಗೆ ಪತ್ರಿಕಾಗೋಷ್ಠಿಯಲ್ಲಿದ್ದ ರಾಮಕೃಷ್ಣರು ನನ್ನಲ್ಲಿ ನಾಯಕ್ ಅಲ್ಲ ನಾಯ್ಕ ಎಂದು ಹೇಳಿದರು. ಅಷ್ಟೊತ್ತಿಗೆ ನಾನು ಸತ್ಯಪ್ರಸಾದ್ ನಾಯ್ಕ ಎಂದು ಹೇಳಿದ್ದೆ‌. ಈ ರೀತಿಯಲ್ಲಿ ಮಾತನಾಡಿದ್ದೆವು. ಬಳಿಕ ಈ ವಿಚಾರ ಖಾಸಗಿ ವೆಬ್ ವೊಂದರಲ್ಲಿ ನಾನು ತಪ್ಪಾಯಿತು ಎಂದು ಅವರಲ್ಲಿ ಕ್ಷಮೆ ಕೇಳಿದ್ದೇನೆ ಎಂದು ವರದಿಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಸತ್ಯಪ್ರಸಾದ್ ಅವರು ಅದೇ ದಿನ ರಾತ್ರಿ ನನಗೆ ಫೋನ್ ಮಾಡಿ ನಮ್ಮ ಸಂಘಟನೆಯನ್ನು ನಾಯ್ಕ ಎಂದು ಹೇಳಿದ ಕಾರಣ ವಕೀಲರಲ್ಲಿಗೆ ಹೋಗಿ ಜಾತಿ ನಿಂದನೆ ಕೇಸು ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು‌.‌
ಬಳಿಕ ನಾನು ರಾಮಕೃಷ್ಣರಿಗೆ ಈ ವಿಷಯ ಹೇಳಿ, ಅವರು ಮತ್ತು ನಾನು ಸತ್ಯಪ್ರಸಾದ್ ಅವರ ಮನೆಗೆ ಹೋಗಿದ್ದೆವು‌. ಅಲ್ಲಿ ಅವರು ನಮ್ಮನ್ನು ನೆಂಟರ ಹಾಗೆ ಸ್ವಾಗತಿಸಿದರು. ಅಲ್ಲಿ ಅವರು ನಮ್ಮೊಡನೆ ನೀವು ಅಪರೂಪವಾಗಿ ಮನೆಗೆ ಬಂದದ್ದು ಎಂದು ಹೇಳಿ, ನಮ್ಮನ್ನು ಚಹ ತಿಂಡಿ ನೀಡಿ ಉಪಚರಿಸಿ ಕಳಿಸಿದ್ದಾರೆ. ಸತ್ಯಪ್ರಸಾದ್ ಅವರು ವೈಯಕ್ತಿಕವಾಗಿ ಒಳ್ಳೆಯ ವ್ಯಕ್ತಿ ” ಎಂದು ಹೇಳಿದರು.

” ಕಳೆದ ಜೀರ್ಣೋದ್ಧಾರ ಸಮಿತಿಗೆ ನಾನು ಭಾಗವಹಿಸಿಲ್ಲ ಎಂದು ಈಗ ಪ್ರಚಾರವಾಗುತ್ತಿದೆ. ಇಲ್ಲ ಖಂಡಿತವಾಗಿಯೂ ಭಾಗವಹಿಸಿಲ್ಲ‌. ಯಾಕೆಂದರೆ ನನಗಾಗಲಿ, ನನ್ನ ತಮ್ಮನಿಗಾಗಲಿ ಯಾವುದೇ ಆಮಂತ್ರಣ ಪತ್ರಿಕೆ ಕೊಟ್ಟಿಲ್ಲ. 1993ರಲ್ಲಿ ನಡೆದ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ನಾನು ಸಕ್ರಿಯವಾಗಿ ಭಾಗವಹಿಸಿದ್ದೆ. ಆಗ ಪ್ರಕಟಗೊಂಡ ಸ್ಮರಣ ಸಂಚಿಕೆಯಲ್ಲಿ ನಮ್ಮ ಹೆಸರು ಮತ್ತು ಪೋಟೋ ಇದೆ. ಆದರೆ ಈಗ ಕಾಂಗ್ರೆಸ್ ಸರ್ಕಾರ ಬಂದರೆ ನಾನು ಅದರಲ್ಲಿ ಭಾಗವಹಿಸುತ್ತೇನೆ ಎಂಬ ವಿಚಾರದಿಂದ ಈ ರೀತಿಯ ಕೆಲಸ ಮಾಡಿದ್ದಾರೆ. ತೊಡಿಕಾನ ಸೀಮೆ ದೇವಸ್ಥಾನವಾದ ಕಾರಣ ಏನಾದರೂ ವ್ಯತಿರಿಕ್ತ ವ್ಯವಸ್ಥೆ ಆದರೆ ದೇವರ ಕೋಪ ಮೊದಲು ಸಿಗುವುದು ಉಳುವಾರು ಕುಟುಂಬಸ್ಥರಿಗೆ” ಎಂದು ತೀರ್ಥರಾಮ ಪರ್ನೋಜಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಜನಾರ್ದನ ಗೌಡ ಅಡ್ಕಬಳೆ, ಯತೀಶ್ ಅಳಿಕೆ, ತೀರ್ಥರಾಮ ಬಾಳೆಕಜೆ ಉಪಸ್ಥಿತರಿದ್ದರು.

Box👇🏻
ಪಿ.ಸಿ. ಜಯರಾಮರು ಚಿನ್ನದಂತ ಮನುಷ್ಯ

ಅವರ ಹೆಸರು ಹಾಳು ಮಾಡಲು ಕಾಂಗ್ರೆಸ್ಸಿನೊಳಗೆ ಒಂದು ಗುಂಪು ಇದೆ : ತೀರ್ಥರಾಮ ಪರ್ನೋಜಿ

ಸುಳ್ಯ ತಾಲೂಕಿ‌ನ ರೈತಸಂಘದಲ್ಲಿ ಇರುವವರು ಬಹುತೇಕರು ಕಾಂಗ್ರೆಸ್ಸಿಗರು. ಆದರೆ ಕೆಲವರು ನಾನು ಕಾಂಗ್ರೆಸ್ ಅಲ್ಲ. ರೈತಸಂಘದವನು ಎಂದು ಹೇಳುತ್ತಾರೆ. ಡಿ.ವಿ. ಸದಾನಂದ ಗೌಡರು ಬಿಜೆಪಿ ಅಧ್ಯಕ್ಷರಾಗಿದ್ದಾಗ ನಾನು ಆರ್.ಎಸ್‌ಎಸ್. ತರಬೇತಿ ಪಡೆದು ಹತ್ತು ವರ್ಷಗಳ ಕಾಲ ಬಿಜೆಪಿ ಸಕ್ರಿಯ ಕಾರ್ಯಕರ್ತನಾಗಿದ್ದೆ. ಆದರೆ ಅಲ್ಲಿ ಒಂದು ಗುಂಪಿನ ರಾಜಕೀಯದಿಂದ ಬೇಸತ್ತು ಜನಾರ್ದನ ಪೂಜಾರಿ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ಕಾಂಗ್ರೆಸ್ ಪಕ್ಷಕ್ಕಾಗಿ ಇವತ್ತಿನ ವರೆಗೂ ಶಕ್ತಿಮೀರಿ ದುಡಿಯುತ್ತಿದ್ದೇನೆ. ನನ್ನ ತಲೆ ಇರುವ ತನಕ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ‌.
ಆದರೆ ಹೇಗಾದರೂ ಮಾಡಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಲು ಈ ರೀತಿಯಲ್ಲಿ ಮಾಡುತ್ತಿದ್ದಾರೆ. ಕೇಶವರನ್ನು ತಾಲೂಕು ಪಂಚಾಯತಿ ಚುನಾವಣೆಗೆ ನಿಲ್ಲಿಸಿದ್ದು ನಾನು‌.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಪಿ.ಸಿ. ಜಯರಾಮರು ಸತ್ಯ, ಧರ್ಮ, ನ್ಯಾಯಯುತವಾದ ಚಿನ್ನದಂತ ಮನುಷ್ಯ. ಆದರೆ ರಾಜಕಾರಣದಲ್ಲಿ ಅವರ ಹೆಸರು ಹಾಳು ಮಾಡಲು ಅದರೊಳಗೆ ಒಂದು ಗುಂಪು ಇದೆ. ಚುನಾವಣೆಯಲ್ಲಿ ಹಣ ಹಂಚಿಕೊಳ್ಳಲು ವ್ಯವಸ್ಥೆ ಇದೆ. ಪ್ರತೀ ಗ್ರಾಮಮಟ್ಟದಲ್ಲಿ ನಿಷ್ಠಾವಂತ ಕಾರ್ಯಕರ್ತರಿದ್ದಾರೆ‌. ಆದರೆ ಇವರಿಗೆ ತುಂಬಾ ಜನ ಕಾರ್ಯಕರ್ತರು ಬೇಕಿಲ್ಲ‌ ಬಡವರ ಬಗ್ಗೆ ಚಿಂತನೆ ಮಾಡುವ ವ್ಯವಸ್ಥೆ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ‌. ಇದು ಇದೇ ರೀತಿಯಲ್ಲಿ ಮುಂದುವರಿದರೆ ಮುಂದೊಂದು ದಿನ ಇಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ನಿರ್ನಾಮ ಆಗಲಿದೆ. ಆದರೆ ಬ್ಲಾಕ್ ಅಧ್ಯಕ್ಷರಾಗಿರುವ ಪಿ.ಸಿ. ಜಯಾಮರು ವ್ಯವಸ್ಥಾಪನ ಸಮಿತಿ ನೇಮಕ ಆದಾಗ ಅಧಿಕಾರಕ್ಕಾಗಿ ಕಚ್ಚಾಡುವ ಸದಸ್ಯರನ್ನು ಶಮನಗೊಳಿಸುವ ಅಧಿಕಾರ ಅವರಿಗೆ ಇರಲಿದೆ ಎಂದು ಹೇಳಿದರು.