ಸುಳ್ಯದ ಶ್ರೀ ಶಾರದಾಂಬ ದಸರಾ ಉತ್ಸವ -2024

0

ಸುಳ್ಯ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿಯ ವತಿಯಿಂದ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ಸುಳ್ಯ ದಸರಾ -2024ರ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮವು ಆರಂಭಗೊಂಡಿದೆ.

ಮೂರನೇ ದಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಳ್ಯದ ಹೆಸರಾಂತ ನೃತ್ಯ ತಂಡಗಳಾದ ಮಂಜು ಬ್ರದರ್ಸ್, ರಂಗ ಮಯೂರಿ ಕಲಾ ಶಾಲೆ, ಪ್ಯೂಷನ್ ಇನ್ಸಿಟ್ಯೂಟ್ ಆಫ್ ಡ್ಯಾನ್ಸ್, ಎಕ್ಸ್ಟಸಿ ಡ್ಯಾನ್ಸ್ ಕ್ರೀವ್ , ಡಿ. ಯುನೈಟೆಡ್ ಡ್ಯಾನ್ಸ್ ಸ್ಟುಡಿಯೋ ಸುಳ್ಯ ವತಿಯಿಂದ ‘ಸಾಂಸ್ಕೃತಿಕ ವೈಭವ’ವು ಶ್ರೀ ಶಾರದಾಂಬ ಕಲಾವೇದಿಕೆಯಲ್ಲಿ ಜರುಗುತ್ತಿದೆ.

ಸುಳ್ಯದ ಹೆಸರಾಂತ ನೃತ್ಯ ತಂಡಗಳ ಸೌರಭ ಕಾರ್ಯಕ್ರಮ ವೀಕ್ಷಿಸಲು ಕಲಾ ಪ್ರೇಕ್ಷಕರು ಅಪಾರ ಸಂಖ್ಯೆಯಲ್ಲಿ ಸೇರಿದ್ದಾರೆ. ರಾತ್ರಿ ಪುರೋಹಿತ ನಾಗರಾಜ ಭಟ್ ಅವರ ನೇತೃತ್ವದಲ್ಲಿ ಶ್ರೀದೇವಿಗೆ ಮಹಾಪೂಜೆ ನಡೆಯಿತು.