ಮಂಗಳೂರಿನಲ್ಲಿ ಮೆಸ್ಕಾಂ ಇಂಜಿನಿಯರ್ ಆಗಿರುವ ಪೈಲಾರಿನ ಗುರುವ ಎಂಬವರ ಪತ್ನಿ ಶ್ರೀಮತಿ ಜಯಂತಿಯವರು ಇಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಮೆದುಳಿನ ರಕ್ತಸ್ರಾವದಿಂದ ನಿಧನರಾದರು.
ಅವರಿಗೆ 33 ವರ್ಷ ವಯಸ್ಸಾಗಿತ್ತು.
ಅವರು ಮಂಗಳೂರಿನಲ್ಲಿ ಗೌರವ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮೃತರು ಪತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.