ಸಂಪಾಜೆಯಲ್ಲಿ ಕಳೆದ ಇಪ್ಪತ್ತು ದಿನಗಳಿಂದ ಕಾಡುತ್ತಿರುವ ಮೊಬೈಲ್ ನೆಟ್ವರ್ಕ್ ಸಮಸ್ಯೆ

0

ಗ್ರಾಮ ಮಟ್ಟದ ಕೆಲಸ ಕಾರ್ಯಗಳಿಗೆ ತೀವ್ರ ತೊಂದರೆ

ದ.ಕ. ಸಂಪಾಜೆ ಹಾಗೂ ಕೊಡಗು ಸಂಪಾಜೆ ಗ್ರಾಮದಲ್ಲಿ ಕಳೆದ ಇಪ್ಪತ್ತು ದಿನಗಳಿಂದ ಯಾವುದೇ ಮೊಬೈಲ್ ನೆಟ್ವರ್ಕ್ ಸರಿಯಾಗಿ ಸಿಗದ ಕಾರಣದಿಂದಾಗಿ ಗ್ರಾಮ ಮಟ್ಟದ ಕೆಲಸ ಕಾರ್ಯಗಳಿಗೆ ತೀವ್ರ ತೊಂದರೆಯಾಗುತ್ತಿದೆ‌.

ಬಿ.ಎಸ್.ಎನ್‌.ಎಲ್. ನೆಟ್ವರ್ಕ್ ವಿದ್ಯುತ್ ಸೌಲಭ್ಯ ಇದ್ದರೆ ಮಾತ್ರ ದೊರೆಯುತ್ತಿದ್ದು, ಕಳೆದ ಇಪ್ಪತ್ತು ದಿನಗಳಿಂದ ಏರ್ ಟೆಲ್, ಜಿಯೋ ನೆಟ್ವರ್ಕ್ ಕೂಡ ಸರಿಯಾಗಿ ಸಿಗುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ, ಗ್ರಾಮ ಪಂಚಾಯತಿ, ಸಹಕಾರಿ ಸಂಘ, ಬ್ಯಾಂಕುಗಳು, ಶಾಲಾ – ಕಾಲೇಜುಗಳು, ವ್ಯಾಪಾರ ಮಳಿಗೆ ಗಳಿಗೆ ತೊಂದರೆಯಾಗುತ್ತಿದ್ದು, ಕೆಲಸ ಕಾರ್ಯಗಳು ಸ್ಥಗಿತಗೊಳ್ಳತ್ತಿರುವುದಾಗಿ ತಿಳಿದುಬಂದಿದೆ.