ಕೇರ್ಪಳ ಪನ್ನೆಬೀಡು ಶ್ರೀ ಭಗವತಿ ದೇವಸ್ಥಾನದ ವಠಾರದಲ್ಲಿ ಭಗವತಿ ಯುವ ಸೇವಾ ಸಂಘದ ಆಶ್ರಯದಲ್ಲಿ ಸ್ವಚ್ಚತಾ ಕಾರ್ಯಕ್ರಮವು ಡಿ.1 ರಂದು ನಡೆಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಬಜರಂಗದಳ,
ದುರ್ಗಾವಾಹಿನಿ ಸಂಘಟನೆಯ ಹಾಗೂ ಪ್ರಕೃತಿ ಯುವಕ ಮಂಡಲ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಒಕ್ಕೂಟ ಮತ್ತು ಭಗವತಿ ಯುವ ಸೇವಾ ಸಂಘದ ಸದಸ್ಯರು ಸ್ವಯಂ ಸೇವಕರಾಗಿ ಭಾಗವಹಿಸಿದರು.
ಬೂಡು ರಾಧಾಕೃಷ್ಣ ರೈ ಮತ್ತು ಸುನಿಲ್ ಕೇರ್ಪಳ ರವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಮಹಿಳೆಯರು, ಪುರುಷರು ಮತ್ತು ಮಕ್ಕಳು ಶ್ರಮದಾನದಲ್ಲಿ ಪಾಲ್ಗೊಂಡರು.