ಸುಳ್ಯ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಬೆಳ್ಳಿ ಹಬ್ಬದ ಪ್ರಯುಕ್ತ ಭಾರತೀಯ ಸಾಂಸ್ಕೃತಿಕ ಸೊಬಗಿನ ಆಚರಣೆ

0

ಸುಳ್ಯದ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಬೆಳ್ಳಿ ಹಬ್ಬದ ಪ್ರಯುಕ್ತ ಶಾಲಾ ಆವರಣದಲ್ಲಿ ಭಾರತೀಯ ಸಾಂಸ್ಕೃತಿಕ ಸೊಬಗನ್ನು ( Ethnic day ) ಡಿ.9 ರಂದು ಆಯೋಜಿಸಲಾಗಿತ್ತು. ಪ್ರೌಢಶಾಲಾ ವಿದ್ಯಾರ್ಥಿನಿಯರಿಂದ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಫಾತಿಮತ್ ಹನಿಯ ಸ್ವಾಗತಿಸಿದರು. ಈ ಕಾರ್ಯಕ್ರಮಕ್ಕೆ ಅಂಜಲಿ ಮಾಂಟೇಸರಿ ಶಾಲೆಯ ಸಂಚಾಲಕಿಯಾದ ಶ್ರೀಮತಿ ಗೀತಾಂಜಲಿ ಶುಭಕರ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.


ಅತಿಥಿಗಳನ್ನು ಸಾಂಪ್ರದಾಯಿಕವಾಗಿ ವೀಳ್ಯದೆಲೆ, ಅಡಿಕೆ ಹಾಗೂ ಮಲ್ಲಿಗೆಹೂವನ್ನು ನೀಡಿ ಸ್ವಾಗತಿಸಲಾಯಿತು. ಶ್ರೀಮತಿ ಗೀತಾಂಜಲಿಯವರು ವಿದ್ಯಾರ್ಥಿ ಗಳನ್ನು ಉದ್ದೇಶಿಸಿ ವೀಳ್ಯದೆಲೆ, ಅಡಿಕೆ ಹಾಗೂ ಮಲ್ಲಿಗೆ ಹೂವಿನ ಮಹತ್ವವನ್ನು ತಿಳಿಸುತ್ತಾ ಭಾರತೀಯ ಸಾಂಪ್ರದಾಯಿಕ ಸೊಬಗು ನಡೆದು ಬಂದ ಪದ್ಧತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯಿಸಿದರು.


ಶಾಲೆಯ ಸಂಚಾಲಕರಾದ ರೆ. ಫಾದರ್ ವಿಕ್ಟರ್ ಡಿ’ಸೋಜಾ ರವರು ಸಭಾಧ್ಯಕ್ಷತೆ ವಹಿಸಿದ್ದು ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಉಡುಗೆ ತೊಡಗೆಯ ಮಹತ್ವವನ್ನು ತಿಳಿಸಿದರು. ಪೂರ್ವ ಪ್ರಾಥಮಿಕ ವಿಭಾಗದ ಪೋಷಕ ಸಮಿತಿಯ ಉಪಾಧ್ಯಕ್ಷರಾದ ಪ್ರಭೋದ್ ಶೆಟ್ಟಿ ಇವರು ಸಭ್ಯ ಉಡುಪುಗಳನ್ನು ಧರಿಸುವ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವೇದಿಕೆಯಲ್ಲಿ ಪ್ರೌಢಶಾಲಾ ವಿಭಾಗದ ಪೋಷಕ ಸಮಿತಿಯ ಉಪಾಧ್ಯಕ್ಷರಾದ ಹೇಮನಾಥ್ ಬಿ ಕೋಡಿಯಾಲಬೈಲ್, ಪ್ರಾಥಮಿಕ ವಿಭಾಗದ ಉಪಾಧ್ಯಕ್ಷರಾದ ಶಶಿಧರ್ ಎಂ ಜೆ ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿ. ಮೇರಿ ಸ್ಟೆಲ್ಲಾ ಉಪಸ್ಥಿತರಿದ್ದರು. ಭಾರತೀಯ ಸಾಂಪ್ರದಾಯಿಕ ಸೊಬಗಿನ ವಿಶೇಷತೆಯನ್ನು ಕುರಿತು ಸಾನ್ವಿ ಮಾತನಾಡಿದರು. ಮುಖ್ಯ ಅತಿಥಿಗಳ ಪರಿಚಯವನ್ನು ಶಿಕ್ಷಕಿ ಶ್ರೀಮತಿ ಚೇತನ ಇವರು ನೆರವೇರಿಸಿದರು.

ಡೆಲ್ಲಾ ಅಜೇಶ್ ವಂದನಾರ್ಪಣೆಗೈದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮ ಎಂ ಬಿ ನೆರವೇರಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ವೇದಿಕೆಯಲ್ಲಿದ್ದ ಎಲ್ಲಾ ಅತಿಥಿಗಳು ರಾಂಪ್ ವಾಕ್ ನಲ್ಲಿ ನಡೆದು ಬಂದು ಎಲ್ಲರನ್ನೂ ರಂಜಿಸಿದರು.