ಸಹಕಾರ ರಂಗದಿಂದ 17 ಮಂದಿ ನಾಮಪತ್ರ ಸಲ್ಲಿಕೆ
ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನ ನಿರ್ದೇಶಕರುಗಳ ಆಯ್ಕೆಗೆ ಮತದಾನ ಜ.15 ರಂದು ನಡೆಯಲಿದೆ.
ಜ.7.ರಂದು ಸಹಕಾರ ರಂಗದ ವತಿಯಿಂದ 17 ಮಂದಿ ನಾಮ ಪತ್ರ ಸಲ್ಲಿಸಿದ್ದಾರೆ. ಸಾಮಾನ್ಯ ಸ್ಥಾನಕ್ಕೆ ಲಕ್ಷ್ಮೀನಾರಾಯಣ ನಡ್ಕ , ರಾಮಮೂರ್ತಿ ನಾಗನಹಿತ್ಲು, ಬಾಲಕೃಷ್ಣ ಬೊಳಿಯೂರು , ರಮೇಶ್ ತಿಪ್ಪನಕಜೆ, ಸುರೇಶ್ ಕುಮಾರ್ ನಡ್ಕ, ಲಕ್ಷ್ಮಣ ಗೌಡ ಆಕ್ರಿಕಟ್ಟೆ , ಚಂದ್ರಶೇಖರ ರೈ ಮಾಳಿಗೆಮನೆ , ಕಾರ್ಯಪ್ಪ ಗೌಡ ಆಕ್ರಿಕಟ್ಟೆ, ಲೋಕಯ್ಯ ಬೊಳಿಯೂರು, ಗಣೇಶ್ ಕೆರೆಕ್ಕೋಡಿ , ಬೆಳ್ಯಪ್ಪ ದೇರೆಟಿ, ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಹರಿಣಾಕ್ಷಿ ಧರ್ಮಡ್ಕ , ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ರವೀಂದ್ರ ಬ್ರಾಂತಿಗದ್ದೆ, ಹಿಂದುಳಿದ ವರ್ಗ ಪ್ರವರ್ಗ ಎ ಸ್ಥಾನಕ್ಕೆ ಗೋಪಾಲ ಪಾಟಾಳಿ ಪೆರಿಯಪ್ಪು,ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನ ಜಯರಾಜ್ ನಡ್ಕ,ಮಹಿಳಾ ಮೀಸಲು ಸ್ಥಾನಕ್ಕೆ ಶಾರದಾ ಎ ಜಿ ಮಜಲುಕರೆ, ಶಿವರಂಜಿನಿ ಅಮೈ ನಾಮ ಪತ್ರ ಸಲ್ಲಿಸಿದ್ದಾರೆ.
ಈ ವೇಳೆ ಬಜಪಾ ಬೆಳ್ಳಾರೆ ಮಹಾ ಶಕ್ತಿ ಕೇಂದ್ರ ದ ಅಧ್ಯಕ್ಷ ಅಜಿತ್ ರಾವ್ ಕಿಲಂಗೋಡಿ, ಕಾರ್ಯದರ್ಶಿ ಅನುಪ್ ಬಿಳಿಮಲೆ, ಸ್ಥಾನಿಯ ಸಮಿತಿ ಕಾರ್ಯದರ್ಶಿ ತೀರ್ಥಾನಂದ, ಬೂತ್ ಅಧ್ಯಕ್ಷ ಚಂದ್ರಶೇಖರ್ ಅಳಕೆ ಉಪಸ್ಥಿತರಿದ್ದರು.