ಅರಂತೋಡಿನ ಆಟೋ ಚಾಲಕ , ತೊಡಿಕಾನ ಗ್ರಾಮದ ಅಡ್ಯಡ್ಕ ನಿವಾಸಿ ಕಂದಸ್ವಾಮಿ ಎಂಬವರು ಇಂದು ಬೆಳಿಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಕಂದಸ್ವಾಮಿಯವರು ನೇಣುಬಿಗಿದುಕೊಂಡ ವಿಷಯ ಗೊತ್ತಾಗಿ ಮನೆಯವರು ಅವರನ್ನು ಹಗ್ಗದಿಂದ ಇಳಿಸಿ, ಸಮೃದ್ಧಿ ಮಾರ್ಟಿನ ಅಂಬ್ಯುಲೆನ್ಸ್ ನಲ್ಲಿ ಸುಳ್ಯದ ಆಸ್ಪತ್ರೆಗೆ ತಂದರೂ, ಆ ವೇಳೆಗೆ ಅವರು ಕೊನೆಯುಸಿರೆಳೆದಿದ್ದರೆನ್ನಲಾಗಿದೆ.
ಕಂದಸ್ವಾಮಿಯವರಿಗೆ 55 ವರ್ಷ ಪ್ರಾಯವಾಗಿತ್ತು. ಪತ್ನಿ ಜ್ಞಾನ ಸುಂದರಿ, ಪುತ್ರರಾದ ರಮೇಶ, ಮನು ಹಾಗೂ ಮಹೇಶರನ್ನು ಅವರು ಅಗಲಿದ್ದಾರೆ.