ಗುತ್ತಿಗಾರು ಸೊಸೈಟಿ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ

0

ಗುತ್ತಿಗಾರು ಪ್ರಾ.ಕೃ.ಸ.ಸಂಘದ 12 ಜನರ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು 12 ರಲ್ಲೂ ಬೆಂಬಲಿತ ಸಹಕಾರ ಭಾರತಿ ದಿಗ್ವಿಜಯ ಭಾರಿಸಿ ಹರ್ಷಾಚರಣೆ ಮಾಡಿತು.

ಆರಂಭದಲ್ಲಿ ನೂತನ ನಿರ್ದೇಶಕರಾಗಿ ಆಯ್ಕೆಯಾದ ವೆಂಕಟ್ ದಂಬೆಕೋಡಿ , ಮುಳಿಯ ಕೇಶವ ಭಟ್ , ಜಯಪ್ರಕಾಶ್ ಮೊಗ್ರ, ನವೀನ್ ಬಾಳುಗೋಡು, ರವೀಂದ್ರ ಕಾನಾವು ಅಡ್ಡನಪಾರೆ, ಪದ್ಮನಾಭ ಮೀನಾಜೆ, ಕೃಷ್ಣಯ್ಯ ಮೂಲೆತೋಟ, ವಿನ್ಯಾಸ್ ಕೊಚ್ಚಿ, ತಿಲಕ ಕೋಲ್ಯ, ವಿನುತಾ ಜಾಕೆ, ಜನಾರ್ದನ ನಾಯ್ಕ ಅಚ್ರಪ್ಪಾಡಿ, ಕುಂಞ ಬಳ್ಳಕ್ಕ ಅವರನ್ನು ಹಾರ ಹಾಕಿ ಗೌರವಿಸಲಾಯಿತು.

ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, , ಎ.ವಿ ತೀರ್ಥರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಗುತ್ತಿಗಾರು ಪೇಟೆಯಲ್ಲಿ ಜೈಕಾರದೊಂದಿಗೆ ಮೆರವಣಿಗೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮುಳಿಯ ತಿಮ್ಮಪ್ಪಯ್ಯ, ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ದಿವಾಕರ ಮುಂಡೋಡಿ, ಕಿಶೋರ್ ಕುಮಾರ್ ಪೈಕ, ಲೊಕೇಶ್ವರ ಡಿ.ಆರ್, ದಯಾನಂದ ಮುತ್ಲಾಜೆ, ಸಂದೀಪ್ ಮೊಟ್ಟೆ ಮನೆ, ಶಿವಪ್ರಸಾದ್ ನಡುತೋಟ, ಶ್ರೀಕಾಂತ್ ಮಾವಿನಕಟ್ಟೆ, ಚಂದ್ರಶೇಖರ ಬಾಳುಗೋಡು, ಸುಮಿತ್ರಾ ಮೂಕಮಲೆ, ಸುಬ್ರಹ್ಮಣ್ಯ ಪಾಲ್ತಾಡು, ವಿಜಯ ಚಾರ್ಮತ, ಹರೀಶ್ ಕೊಯಿಲ ಮತ್ತಿತರರು ಉಪಸ್ಥಿತರಿದ್ದರು.