ಮಾ.15,16 : ಬೆಳ್ಳಾರೆ ಬೂಡು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಹಾಗೂ ಸಪರಿವಾರ ದೈವಗಳ ನೇಮೋತ್ಸವ

0

ಬೆಳ್ಳಾರೆ ಗ್ರಾಮದ ಬೂಡು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿಯಲ್ಲಿ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಹಾಗೂ ಸಪರಿವಾರ ದೈವಗಳ ನೇಮೋತ್ಸವವು ಮಾ.15 ಮತ್ತು ಮಾ.16 ರಂದು ನಡೆಯಲಿದೆ.


ಮಾ.15 ರಂದು ಬೆಳಿಗ್ಗೆ ಗಂಟೆ 6.00 ಕ್ಕೆ ಗಣಪತಿ ಹೋಮ,8.00 ಕ್ಕೆ ಗೊನೆಮುಹೂರ್ತ,ಜಾಗದ ಪಂಜುರ್ಲಿಗೆ ತಂಬಿಲ,ಸಂಜೆ ಗಂಟೆ 3.00 ಗುಳಿಗ ದೈವಕ್ಕೆ ಎಣ್ಣೆ ಬೂಳ್ಯ ಸಂಜೆ ಗಂಟೆ 4.00 ಕ್ಕೆ ಗುಳಿಗ ದೈವದ ನೇಮೋತ್ಸವ 6.00 ಕ್ಕೆ ಶ್ರೀ ಮೊಗೇರ್ಕಳ ದೈವಗಳಿಗೆ ಹಾಗೂ ಕೊರಗಜ್ಜ ದೈವಕ್ಕೆ ಎಣ್ಣೆಬೂಳ್ಯ ನಡೆಯಲಿದೆ.
ರಾತ್ರಿ ಗಂಟೆ 9.00 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ ಗಂಟೆ 10.00 ಕ್ಕೆ ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿಯುವುದು ರಾತ್ರಿ ಗಂಟೆ 12.00 ಕ್ಕೆ ಶ್ರೀ ತನ್ನಿಮಾನಿಗ ದೈವವು ಗರಡಿ ಇಳಿಯುವುದು ಹಾಗೂ ಪ್ರಸಾದ ವಿತರಣೆ ನಡೆಯಲಿದೆ.


ಮಾ.16 ರಂದು ಬೆಳಿಗ್ಗೆ ಗಂಟೆ 5.00ಕ್ಕೆ ಶ್ರೀ ಮೊಗೇರ್ಕಳ ದೈವಗಳು ಹಾಲು ಕುಡಿಯುವುದು ಬೆಳಿಗ್ಗೆ ಗಂಟೆ 7.00 ಕ್ಕೆ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ಪ್ರಸಾದ ವಿತರಣೆ ನಡೆಯಲಿದೆ.


ಮಧ್ಯಾಹ್ನ ಗಂಟೆ 1.00 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಮಾ.25 ರಂದು ಶ್ರೀ ಮೊಗೇರ್ಕಳ ದೈವಗಳಿಗೆ ಬಿರಿಮಂಜಸೇವೆ,ಕೊರಗಜ್ಜನಿಗೆ ಹರಕೆಯ ಅಗೇಲು ಸೇವೆಗಳು ಹಾಗೂ ಲೆಕ್ಕಪತ್ರ ಮಂಡನೆ ನಡೆಯಲಿದೆ.