ನಮ್ಮ ಊರು ನಮ್ಮ ಹೆಮ್ಮೆ : ಸುದ್ದಿ ಸುಳ್ಯ ಹಬ್ಬ

0

ಅಧಿಕಾರ ವಿಕೇಂದ್ರೀಕರಣ ಮತ್ತು ಊರಿನ ಪ್ರಗತಿಯಲ್ಲಿ ಸುದ್ದಿಯ ಕೊಡುಗೆ ಅಪಾರವಿದೆ. ವಿಳಂಬ ನೀತಿಯ ವಿರುದ್ಧ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಸುದ್ದಿ ಪ್ರಯತ್ನಪಟ್ಟಿದೆ. ಸುಳ್ಯ ಸುದ್ದಿ ಹಬ್ಬದಂತಹ ಧನಾತ್ಮಕ ಕಾರ್ಯಕ್ರಮಗಳನ್ನು ನಾವೆಲ್ಲ ಬೆಂಬಲಿಸೋಣ ಎಂದು ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಬಿಜೆಪಿ ಮುಖಂಡ ನಾಗೇಶ್ ಕುಂದಲ್ಪಾಡಿ ಹೇಳಿದರು.

ನಮ್ಮ ಊರು ನಮ್ಮ ಹೆಮ್ಮೆ ಅಭಿಯಾನ ಹಾಗೂ ಸುದ್ದಿ ಸುಳ್ಯ ಹಬ್ಬದ ಭಾಗವಾಗಿ ಪೆರಾಜೆ ಪಂಚಾಯತ್ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಬಾಲಚಂದ್ರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಕಾಂಗ್ರೆಸ್ ನಾಯಕ ಸುರೇಶ್ ಪೆರುಮುಂಡ ಮಾತನಾಡಿದರು.

ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಸುದ್ದಿ ಮಾಹಿತಿ ವಿಭಾಗ ಮುಖ್ಯಸ್ಥ, ವರದಿಗಾರ ಕೃಷ್ಣ ಬೆಟ್ಟ ಸ್ವಾಗತಿಸಿ ಪ್ರಸ್ತಾವನೆಗೈದರು.

ಸಭೆಯಲ್ಲಿದ್ದವರ ಸಲಹೆ ಸೂಚನೆ ಪಡೆದು ಪೆರಾಜೆ ಗ್ರಾಮ ಸಮಿತಿಯನ್ನು ರಚಿಸಲಾಯಿತು.

ಗೌರವಾಧ್ಯಕ್ಷರುಗಳಾಗಿ ವೇದವ್ಯಾಸ ಭಟ್ ಪೆರಾಜೆ, ನಾಗೇಶ್ ಕುಂದಲ್ಪಾಡಿ, ಅಧ್ಯಕ್ಷರಾಗಿ ನಂಜಪ್ಪ ನಿಡ್ಯಮಲೆ, ಕಾರ್ಯಾಧ್ಯಕ್ಷರಾಗಿ ಸುರೇಶ್ ಪೆರುಮುಂಡ, ಸಂಚಾಲಕರಾಗಿ ಪ್ರವೀಣ್ ಮಜಿಕೋಡಿ, ಸಂಯೋಜಕರಾಗಿ ಸೀತಾರಾಮ ಕದಿಕಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ಪೆರುಮುಂಡ, ಕೋಶಾಧಿಕಾರಿಯಾಗಿ ಪ್ರದೀಪ್ ಪೆರಾಜೆ, ಉಪಾಧ್ಯಕ್ಷರುಗಳಾಗಿ ಚಂದ್ರಕಲಾ ಬಾಲಚಂದ್ರ, ಜಿತೇಂದ್ರ ಎನ್.ಎ., ಲೋಕನಾಥ್ ಅಮೆಚೂರು, ಮನು ಪೆರುಮುಂಡ, ಪ್ರಸನ್ನ ನೆಕ್ಕಿಲ, ಬಾಲಚಂದ್ರ ತೊಕ್ಕುಳಿ, ಸುಭಾಸ್ ಚಂದ್ರ ಬಂಗಾರಕೋಡಿ, ತಿರುಮಲೇಶ್ವರ ಬಿ.ಎಂ., ಕೆ.ಕೆ.ಪದ್ಮಯ್ಯ, ತೇಜಪ್ರಸಾದ್ ಅಮೆಚೂರು, ಕೋಡಿ ಧನಂಜಯ, ಭುವನೇಶ್ ನಿಡ್ಯಮಲೆ, ಪಿ.ಎನ್.ಅಬೂಬಕರ್, ಲೋಕೇಶ್ ಹೊದ್ದೆಟ್ಟಿ, ರಮೇಶ್ ಮಜಿಕೋಡಿ,
ಪಿ.ಎಂ. ಅಬೂಬಕರ್, ಕಾರ್ಯದರ್ಶಿಯಾಗಿ ಸುಮನ್ ಕುಮಾರ್ ಪೀಚೆ, ಸದಸ್ಯರುಗಳಾಗಿ ಉದಯಚಂದ್ರ ಕುಂಬಳಚೇರಿ, ದೀನರಾಜ್ ದೊಡ್ಡಡ್ಕ, ನೋಹಿತ್ ನಿಡ್ಯಮಲೆ, ಪೂರ್ಣಿಮಾ ಉದಯಕುಮಾರ್, ಚಂದ್ರಿಕಾ ಹೊದ್ದೆಟ್ಟಿ, ಚಿನ್ನಪ್ಪ ಅಡ್ಕ, ಶೇಷಪ್ಪ ಎನ್.ವಿ., ಜಯರಾಮ ಪಿ.ಟಿ., ಮಾದಪ್ಪ ಜೆ.ಟಿ., ಎನ್.ಜಿ. ರಾಜಶೇಖರ್, ಬಾಲಚಂದ್ರ ಟಿ.ಆರ್, ಮಾದಪ್ಪ ಟಿ.ಬಿ., ಹೊನ್ನಪ್ಪ ಡಿ.ಆರ್, ರಾಮಯ್ಯ ಜೆ.ಕೆ. ಆಯ್ಕೆಗೊಂಡರು.

ಸುದ್ದಿ ಪ್ರಕಾಶಕ ಕುಶಾಂತ್ ಕೊರತ್ಯಡ್ಕ, ಚಾನೆಲ್ ಸಿಬ್ಬಂದಿ ಕೌಶಿಕ್ ರಾಮ್ ಬಳ್ಳಕ, ಸುದ್ದಿ ಪ್ರತಿನಿಧಿ ಸೀತರಾಮ ಕದಿಕಡ್ಕ ಸಹಕರಿಸಿದರು.