ಕೋಲ್ಚಾರು ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಮಹಿಳಾ ದಿನಾಚರಣೆ

0

ಆಲೆಟ್ಟಿ ಗ್ರಾಮದ ಕೋಲ್ಚಾರು ಶ್ರೀ ಶಾರದಾಂಬಾ ಸಭಾಭವನದಲ್ಲಿ ಕೋಲ್ಚಾರಿನ ಸ್ತ್ರೀ ಶಕ್ತಿ ಗುಂಪುಗಳು ಮತ್ತು ಅಂಗನವಾಡಿ ಕೇಂದ್ರದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ತೃಪ್ತಿ ಗೊಂಚಲಿನ ಅಧ್ಯಕ್ಷೆ ಶ್ರೀಮತಿ ಲಲಿತ ಕುಡೆಂಬಿ ಅಧ್ಯಕ್ಷತೆ ವಹಿಸಿದ್ದರು.


ಸಿ .ಡಿ .ಪಿ .ಓ
ಇಲಾಖಾಧಿಕಾರಿ ಶೈಲಜಾ ರವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಮೇಲ್ವಿಚಾರಕಿ ದೀಪಿಕಾ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ರಂಗನಾಥ್ ಎಂ.ಎಸ್ ಹೆಣ್ಣು ಮಕ್ಕಳಿಗೆ ಶಿಕ್ಷಣದ ಅವಶ್ಯಕತೆಯ ಕುರಿತು ಮಾಹಿತಿ ಮಾರ್ಗದರ್ಶನ ನೀಡಿದರು.
ವೇದಿಕೆಯಲ್ಲಿ ಪಂಚಾಯತ್ ಸದಸ್ಯೆ ಶ್ರೀಮತಿ ಶಂಕರಿ‌ ಕೊಲ್ಲರಮೂಲೆ, ಶ್ರೀಮತಿ ಗೀತಾ ಕೋಲ್ಚಾರು, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಸಂಧ್ಯಾ ಕೋಲ್ಲರಮೂಲೆ, ಬ್ಲಾಕ್ ಸೊಸೈಟಿ ಸದಸ್ಯೆ ಅನುಪಮಾ ಬಳ್ಯಾಡಿ, ಸಂಜೀವಿನಿ ಒಕ್ಕೂಟದ ರೇಣುಕಾ ಕಣಕ್ಕೂರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಮಹಿಳೆಯರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಆರಂಭದಲ್ಲಿ ನಾಡಗೀತೆ ಪ್ರಸ್ತುತಪಡಿಸಿದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರತ್ನಾವತಿ ವಾಲ್ತಾಜೆ ಸ್ವಾಗತಿಸಿದರು. ಉಷಾ ಕಣಕ್ಕೂರು ಬಹುಮಾನ ಪಟ್ಟಿ ವಾಚಿಸಿದರು. ಚಂಚಲಾಕ್ಷಿ ಹಾಸ್ಪಾರೆ ವಂದಿಸಿದರು. ಶ್ರೀಮತಿ ಶಾಲಿನಿ ಪರಮಂಡಲ ಕಾರ್ಯಕ್ರಮ ನಿರೂಪಿಸಿದರು.‌ ಎಲ್ಲರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.