ಬೆಳ್ತಂಗಡಿ ಸೌಜನ್ಯ‌ ಹತ್ಯೆ ಪ್ರಕರಣ : ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು

0

ಸರಕಾರಕ್ಕೆ‌ ಮನವಿ ಮಾಡಲು ನಿರ್ಧಾರ : ಅರಂತೋಡು ಗ್ರಾಮ ಗೌಡ‌ ಸಮಿತಿ‌ ಸಭೆ

ಬೆಳ್ತಂಗಡಿಯ ಸೌಜನ್ಯ ಕೊಲೆ ಪ್ರಕರಣದ ನಿಗೂಢತೆಯನ್ನು ಭೇದಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಹತ್ಯೆಗೀಡಾಗಿರುವ ಹೆಣ್ಣು ಮಗಳ ಮನೆಯವರಿಗೆ ನ್ಯಾಯ ದೊರಕಲು ನ್ಯಾಯಾಂಗದ ಮೇಲೆ ಮತ್ತು ಸರ್ಕಾರದ ಮೇಲೆ ಒತ್ತಡ ತರಬೇಕು. ಈ ನಿಟ್ಟಿನಲ್ಲಿ ಸರಕಾರಕ್ಕೆ ಮನವಿ ಸಲ್ಲಿಸಲು ಅರಂತೋಡು ಗೌಡ ಗ್ರಾಮ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಜು. 29 ರಂದು ಅರಂತೋಡಿನ ಸಿರಿ ಸೌಧ ದಲ್ಲಿ ನಡೆದ ಗೌಡ ಸಮುದಾಯ ಭಾಂದವರ ಸಭೆ ನಡೆಯಿತು. ಸಭೆಯ ವೇದಿಕೆಯಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ಎ ವಿ ತೀರ್ಥರಾಮ, ನಿವೃತ್ತ ಪ್ರಾಂಶುಪಾಲ ಕೆ ಆರ್ ಗಂಗಾಧರ, ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ತರುಣ ಘಟಕ ದ ಅಧ್ಯಕ್ಷ ವಿನೋದ್ ಉಳುವಾರು, ಮಹಿಳಾ ಘಟಕದ ವಾರಿಜ ಕುರುಂಜಿ ಉಪಸ್ಥಿತರಿದ್ದರು .


ಈ ಸಭೆಯಲ್ಲಿ ಸುಳ್ಯಗೌಡರ ಯುವ ಸೇವಾ ಸಂಘದ ವತಿಯಿಂದ ಆಗಸ್ಟ್ 1ರಂದು ಸುಳ್ಯದಲ್ಲಿ ನಡೆಯುವ ವಾಹನ ಜಾಥಾ ಮತ್ತು ಮರು ತನಿಖೆಗೆ ಒತ್ತಾಯಿಸಿ ಮನವಿ ಸಲ್ಲಿಸುವ ಕಾರ್ಯಕ್ರಮ ದಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಅರಂತೋಡಿನ ಗೌಡ ಜನಾಂಗದ ನೂರಾರು ಮಂದಿ ಭಾಗವಹಿಸಿದ್ದರು.