ನಿವೃತ್ತ ಮುಖ್ಯ ಶಿಕ್ಷಕ ಪದ್ಮಯ್ಯ ಮಾಸ್ತರ್ ಮೂಕಮಲೆ ನಿಧನ

0

ಕೊಲ್ಲಮೊಗ್ರು ಗ್ರಾಮದ ನಿವೃತ್ತ ಮುಖ್ಯೋಪಾಧ್ಯಾಯ, ಕೊಲ್ಲಮೊಗ್ರು ಕೆ.ವಿ.ಜಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸುರೇಶ್ ಅವರ ತಂದೆ ಪದ್ಮಯ್ಯ ಮಾಸ್ತರ್ ಮೂಕಮಲೆ ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಸುರೇಶ್ ಪಿ.ಕೆ, ವಿದೇಶದಲ್ಲಿರುವ ಮಹೇಶ್ ಪಿ.ಕೆ, ಜಯಪ್ರಕಾಶ್ ಪಿ.ಕೆ ಹಾಗೂ ಸಹೋದರರು, ಸಹೋದರಿ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.