ಮಾ.17 ರಂದು ಲಯನ್ಸ್ ಕ್ಲಬ್, ಕುಕ್ಕೆ ಸುಬ್ರಹ್ಮಣ್ಯ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮ

0

ಹಲವು ಕೊಡುಗೆಗಳ ಹಸ್ತಾಂತರ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದಕ್ಕೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮ ಮಾ.17 ರಂದು ನಡೆಯಲಿದೆ. ಸಂಜೆ ಇಂಜಾಡಿ ಮಹಾಮ್ಮಾಯ ರೆಸಿಡೆನ್ಸಿ ಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

ಜಿಲ್ಲೆ 317D ಇದರ ರಾಜ್ಯಪಾಲರಾದ ಲಯನ್ಸ್ ಎಸ್ ಸಂಜಿತ್ ಶೆಟ್ಟಿ ಇವರು ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಅಧಿಕೃತ ಭೇಟಿ ನೀಡಲಿರುವರು. ಈ ಸಂದರ್ಭದಲ್ಲಿ ಲಯನ್ಸ್ ಕುಕ್ಕೆ ಸುಬ್ರಹ್ಮಣ್ಯ ವತಿಯಿಂದ
ಸುಬ್ರಹ್ಮಣ್ಯದ ಯುವ ತೇಜಸ್ ಸಂಸ್ಥೆಗೆ,
ಜಿಲ್ಲಾ ಸಂಸ್ಥೆ ಕಿಮಾಟೋರಿಯಂಗೆ ದೇಣಿಗೆ,
ಕೊಲ್ಲಮೊಗ್ರದ ಬೆಂಡೋಡಿ ಶಾಲೆಗೆ ಧ್ವನಿವರ್ಧಕ, ಬಾಳುಗೋಡಿನ ಅಂಗನವಾಡಿಗೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ, ಪರ್ವತಮುಖಿ ಅಂಗನವಾಡಿಗೆ ಮಿಕ್ಸಿ ಕೊಡುಗೆ, ದೇವರಗದ್ದೆ ಅಂಗನವಾಡಿಗೆ ಶಾಲೆಗೆ ಆಟದ ಸಾಮಾನು ಇಡಲು ಕಪಾಟಿನ ವ್ಯವಸ್ಥೆ ಮತ್ತಿತರ ಕೊಡುಗೆ ನೀಡಲಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನ ಅಧ್ಯಕ್ಷ ಕೆ.ಆರ್ ಶೆಟ್ಟಿಗಾರ್, ಕಾರ್ಯದರ್ಶಿ ಸತೀಶ್ ಕೂಜುಗೋಡು, ಕೋಶಾಧಿಕಾರಿ ರಾಮಚಂದ್ರ ಪಳಂಗಾಯ, ಪ್ರಥಮ ಉಪಾಧ್ಯಕ್ಷ ರಾಜೇಶ್ ಎನ್ ಎಸ್, ಜಿ.ಎಸ್.ಟಿ ಕೋರ್ಡಿನೇಟರ್ ವಿಮಲಾ ರಂಗಯ್ಯ ಉಪಸ್ಥಿತರಿದ್ದರು.