ಕಳಂಜ ಗ್ರಾ.ಪಂ. ವತಿಯಿಂದ ಉಚಿತ ಕನ್ನಡಕ ವಿತರಣೆ

0

ಕಳೆದ ಏ. 23ರಂದು ಅಯ್ಯನಕಟ್ಟೆಯ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸಮುದಾಯ ಭವನದಲ್ಲಿ ನಡೆದ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ನೇತ್ರ ತಪಾಸಣೆಗೊಳಗಾಗಿ ಕನ್ನಡಕದ ಅವಶ್ಯಕತೆಯಿರುವರಿಗೆ ಉಚಿತ ಕನ್ನಡಕ ವಿತರಣೆ ಮೇ. 23ರಂದು ಕಳಂಜ ಗ್ರಾ.ಪಂ. ಕಚೇರಿಯಲ್ಲಿ ನಡೆಯಿತು.

ಕಳಂಜ ಗ್ರಾಮ ಪಂಚಾಯತ್, ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ ಕೋಟೆಮುಂಡುಗಾರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ನೇತ್ರಜೋತಿ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಯಶಸ್ವಿ ನಾಗರಿಕ ಸೇವಾ ಸಂಘ ಕಾರ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ನೇತ್ರ ವೈದ್ಯರ ನಡೆ ಕಾರ್ಯಕ್ರಮದ ಯೋಜನೆಯಲ್ಲಿ ಸುಳ್ಯ ತಾಲೂಕು ಮಟ್ಟದ ಸರಣಿ ಕಾರ್ಯಕ್ರಮದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮೇ‌. 23ರಂದು ಕನ್ನಡಕ ವಿತರಣೆ ಸಂದರ್ಭದಲ್ಲಿ ಕಳಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಕುಮಾರ್ ಕಿಲಂಗೋಡಿ, ಉಪಾಧ್ಯಕ್ಷ ಗಣೇಶ್ ರೈ, ಪಿ ಡಿ.ಓ ಪದ್ಮಯ ಕೆ, ಶಿಬಿರದ ನಿರ್ದೇಶಕರಾದ ಮುರಳಿಧರ ಸಿ.ಹೆಚ್ ಸದಸ್ಯರಾದ ಶ್ರೀಮತಿ ಪ್ರೇಮಲತಾ, ಶ್ರೀಮತಿ ಸುಧಾ, ಶ್ರೀಮತಿ ಕಮಲ, ಬಾಲಕೃಷ್ಣ ಬೇರಿಕೆ, ಸಿಬ್ಬಂದಿಗಳಾದ ಕು. ಭವ್ಯ, ಗಿರಿಧರ್ ಕಳಂಜ, ಪುರುಷೋತ್ತಮ, ಗ್ರಂಥ ಪಾಲಕಿ ಪುಷ್ಪಾವತಿ ಮತ್ತಿತರರು ಉಪಸ್ಥಿತರಿದ್ದರು.