ಸುಳ್ಯ ನಗರ ಪಂಚಾಯತ್ ಆವರಣದಲ್ಲಿ ಮೇಯಲು ಬಂದ ಆಡುಗಳು

0

ದಂಡ ಪಾವತಿಸಿ ಆಡನ್ನು ಕೊಂಡೊಯ್ಯಲು ನ.ಪಂ ಸೂಚನೆ

ಸುಳ್ಯ ನಗರದಲ್ಲಿ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಮೇಯಲು ಬಂದ ಆಡುಗಳನ್ನು ಸುಳ್ಯ ನಗರ ಪಂಚಾಯತ್‌ ನವರು ಹಿಡಿದು ಕಟ್ಟಿ ಹಾಕಿದ್ದಾರೆ.

ಮೂರು ಆಡುಗಳು ಮೇಯಲು‌ ನಗರ ಪಂಚಾಯತ್ ಅವರಣಕ್ಕೆ ಬಂದಿದ್ದು ನಗರ ಪಂಚಾಯತ್ ಅವರಣದಲ್ಲಿದ ಗಿಡಗಳನ್ನು ಚೆನ್ನಾಗಿ ಮೇದಿದ್ದವು. ಇದನ್ನು ಕಂಡ ನಗರ ಪಂಚಾಯತ್ ಸಿಬ್ಬಂದಿಗಳು ಆಡುಗಳನ್ನು ಹಿಡಿದು ಕಟ್ಟಿ ಹಾಕಿದ್ದಾರೆ.


ನಗರ ಪಂಚಾಯತ್ ಗೆ ಸೂಕ್ತ ದಂಡ ಕಟ್ಟಿ ಬಿಡಿಸಿಕೊಂಡು ಹೋಗುವಂತೆ ಮಾಲೀಕರಿಗೆ ಸೂಚಿಸಲಾಗಿದೆ.
ಸಾರ್ವಜನಿಕ ರಸ್ತೆಯಲ್ಲಿ ಸಾಕುಪ್ರಾಣಿಗಳನ್ನು ಬಿಡಬಾರದು ಎಂದು ಅನೇಕ ಬಾರಿ ನಗರ ಪಂಚಾಯತ್ ಪ್ರಕಟಿಸಿದರೂ ಜನರು ರಸ್ತೆಗೆ ಸಾಕು ಪ್ರಾಣಿಗಳನ್ನು ಬಿಡುತ್ತಿದ್ದಾರೆ.


ಇವತ್ತು ಸುಳ್ಯ ನಗರ ಪಂಚಾಯತ್ ಆವರಣದಲ್ಲಿ ಗಿಡಗಳನ್ನು ತಿಂದ ಆಡುಗಳನ್ನು ಕಟ್ಟಿ ಹಾಕಿದ ವಿಚಾರ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ರವರು ನಗರ ಪಂಚಾಯತ್ ವಾಟ್ಸಪ್ ಗ್ರೂಪ್ ನಲ್ಲಿ ಆಡು ಕಟ್ಟಿ ಹಾಕಿದ ವಿಚಾರವನ್ನು ತಿಳಿಸಿ ಆಡಿನ ವಾರಿಸುದಾರರು ಸೂಕ್ತ ದಂಡ ಪಾವತಿಸಿ ಆಡುಗಳನ್ನು ಕೊಂಡೊಯ್ಯಲು ತಿಳಿಸಿದ್ದಾರೆ