ಬಿಎಸ್ಸೆನ್ನೆಲ್ ಮೊಬೈಲ್ ಟವರ್ ಅಳವಡಿಕೆಗೆ ನಿವೇಶನ ಹಸ್ತಾಂತರ ಕುರಿತು ಸಭೆ

0

ಬಿಎಸ್ಎನ್ಎಲ್ ಮೊಬೈಲ್ ಟವರ್ ಅಳವಡಿಕೆಗೆ 200ಚ.ಮೀ ಅಳತೆಯ ಸರಕಾರಿ ನಿವೇಶನವನ್ನು ಟೆಲಿಕಾಮ್ ಇಲಾಖೆಗೆ ಹಸ್ತಾಂತರ ಮಾಡುವ ಕುರಿತು ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರ ಅಧ್ಯಕ್ಷತೆಯಲ್ಲಿ ಹಾಗೂ ತಹಶೀಲ್ದಾರರು ಸುಳ್ಯ ತಾಲೂಕು ಇವರ ಉಪಸ್ಥಿತಿಯಲ್ಲಿ ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಜೂ.26 ರಂದು ಸಭೆ ನಡೆಯಿತು.

ಈ ಸಭೆಯಲ್ಲಿ ಕಂದಾಯ ನಿರೀಕ್ಷಕರು( ಸುಳ್ಯ ಹಾಗೂ ಪಂಜ), ಅಜ್ಜಾವರ, ಆಲೆಟ್ಟಿ, ಅರಂತೋಡು, ಅಮರಮುಡ್ನೂರು, ದೇವಚಳ್ಳ, ಗುತ್ತಿಗಾರು, ಹರಿಹರ ಪಲ್ಲತ್ತಡ್ಕ, ಐರ್ವನಾಡು, ಜಾಲ್ಸೂರು, ಕೊಲ್ಲಮೊಗ್ರು, ಮಂಡೆಕೋಲು, ಮಡಪ್ಪಾಡಿ, ನೆಲ್ಲೂರು ಕೆಮ್ರಾಜೆ, ಪಂಜ, ಉಬರಡ್ಕ ಮಿತ್ತೂರು, ಸಂಪಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು ಹಾಜರಿದ್ದರು.

ಸುಳ್ಯ ತಾಲೂಕಿನಲ್ಲಿ ಬಿಎಸ್ಎನ್ಎಲ್ ಮೊಬೈಲ್ ಟವರ್ ಅಳವಡಿಕೆಗೆ ಗುರುತಿಸಿರುವ 23 ನಿವೇಶನಗಳ ಬಗ್ಗೆ ಸಬ್ ಡಿವಿಜನಲ್ ಇಂಜಿನಿಯರ್ ಪ್ರಸಾದ್ ಕೆ ಇವರು ಮಾಹಿತಿಯನ್ನು ನೀಡಿದರು.