ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶಿಶು ಪೋಷಣಾ ಕೊಠಡಿ ಉದ್ಘಾಟನೆ

0

ಭಕ್ತರ ಸಂದಣಿಯಲ್ಲಿ ಮಗುವಿನ ಆರೈಕೆ ಮಾಡಲು ಕಷ್ಟವಾಗುವುದಕ್ಕೆ ಇದು ಉತ್ತಮ ವ್ಯವಸ್ಥೆ: ಶಾಸಕಿ ಭಾಗೀರಥಿ ಮುರುಳ್ಯ

ತಾಯಿ ತನ್ನ ಮಗುವನ್ನು ಪ್ರೀತಿಯಿಂದ ಆರೈಕೆ ಮಾಡುತ್ತಾಳೆ. ಮಗು ಕೂಗುವಾಗ ತಾಯಿಗೆ ಮಗುವನ್ನು ಜನ ಸಂದಣಿಯಲ್ಲಿ ಆರೈಕೆ ಮಾಡಲು ಕಷ್ಟವಾಗಬಹುದು. ಅದಕ್ಕಾಗಿ ಇಲ್ಲಿ ಇಂದು ತೆರೆಯಲಾದ ಶಿಶು ಪೋಷಣಾ ಕೊಠಡಿಯಲ್ಲಿ ತಾಯಿ ಮಗುವಿನೊಂದಿಗೆ ಅನ್ಯೋನ್ಯತೆಯಿಂದ ಮಗುವಿನ ಆರೈಕೆಗೆ ಸಹಕಾರಿಯಾಗಲಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಅವರು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸುಬ್ರಹ್ಮಣ್ಯ ಹಾಗೂ ಕಸ್ವಿ ಹಸಿರು ದಿಬ್ಬಣ ಇದರ ವತಿಯಿಂದ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜೂ.29 ರಂದು ಶಿಶು ಪೋಷಣಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡುತಿದ್ದರು. ಕೊಠಡಿ ಉದ್ಘಾಟನೆ ಬಳಿಕ ದೇವಸ್ಥಾನದ ಧರ್ಮ ಸಮ್ಮೇಳನ ಮಂಟಪದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.


ಶಿಶು ಪೋಷಣಾ ಕೊಠಡಿಯಲ್ಲಿ ತಾಯಿ ತನ್ನ ಮಗುವನ್ನು ಯಾವುದೇ ಅಂಜಿಕೆಯಿಲ್ಲದೇ, ಲವಲವಿಕೆಯಿಂದ ಆರೈಕೆ ಮಾಡಬಹುದಾಗಿದೆ. ಕೇಶವ ರಾಮಕುಂಜ ಅವರು ತನ್ನ ಮಗಳ ಹುಟ್ಟುಹಬ್ಬದ ಅಂಗವಾಗಿ ಕಸ್ವಿ ಹಸಿರು ದಿಬ್ಬಣ ವತಿಯಿಂದ ಶಿಶು ಪೋಷಣಾ ಕೊಠಡಿ ತೆರೆದಿರುವುದು ಉತ್ತಮ ಕೆಲಸ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾl ನಿಂಗಯ್ಯ, ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ| ತ್ರಿಮೂರ್ತಿ, ಡಿಜಿಎಂ ಸೇಲ್ಸ್ ಮಾಡೋವಿ ಮೋಟರ್ಸ್ ನ ಶಶಿಧರ್ ಕಾರಂತ್, ಸುಬ್ರಹ್ಮಣ್ಯ ಕೆ.ಎಸ್.ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೋ. ಬಾಲಕೃಷ್ಣ ಪೈ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೋಭಾ ಗಿರಿಧರ್, ವನಜಾ ವಿ. ಭಟ್, ಕಸ್ವಿ ಹಸಿರು ದಿಬ್ಬಣದ ಕಾರ್ಯದರ್ಶಿ ಬಾಬು ಗೌಡ ಮತ್ತಿತರರು ಉಪಸ್ಥಿತರಿದ್ದರು. ಕಸ್ವಿ ಹಸಿರು ದಿಬ್ಬಣದ ಅಧ್ಯಕ್ಷ ಕೇಶವ ರಾಮಕುಂಜ ಸ್ವಾಗತಿಸಿದರು. ಹರ್ಷ ಆರ್. ವಂದಿಸಿದರು. ಸಂತೋಷ್ ಬಿ.ಕೆ. ಕಾರ್ಯಕ್ರಮ ನಿರೂಪಿಸಿದರು.