ಕಳಂಜ ಗ್ರಾಮ ಸಭೆ

0

ಮಣಿಮಜಲು ರಸ್ತೆ ಸಂಚಾರ ಸ್ಥಗಿತಗೊಂಡ ಬಗ್ಗೆ, ನಿವೇಶನ ಜಾಗ, ಪಂಪ್ ಆಪರೇಟರ್ ರಾಜಿನಾಮೆ ಬಗ್ಗೆ ಚರ್ಚೆ

ಕಳಂಜ ಗ್ರಾಮ ಪಂಚಾಯತ್ ನ ಗ್ರಾಮ ಸಭೆ ಇಂದು ಕಳಂಜ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ನ ಅಧ್ಯಕ್ಷ ಪ್ರಶಾಂತ್ ಕುಮಾರ್ ಕಿಲಂಗೋಡಿ ವಹಿಸಿದ್ದರು. ನೋಡೆಲ್ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶ್ರೀಮತಿ ಗೀತಾ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷರಾದ ಗಣೇಶ್ ರೈ, ಸದಸ್ಯರುಗಳಾದ, ಬಾಲಕೃಷ್ಣ ಬೇರಿಕೆ, ಶ್ರೀಮತಿ ಕಮಲ, ಶ್ರೀಮತಿ ಪ್ರೇಮಲತಾ, ಶ್ರೀಮತಿ ಸುದಾ, ಪಿಡಿಒ ಪದ್ಮಯ್ಯ ಕುಂಬಾರ ಉಪಸ್ಥಿತರಿದ್ದರು. ಪಿಡಿಒ ಸ್ವಾಗತಿಸಿದರು.

ಸಭೆಯಲ್ಲಿ ಮಣಿಮಜಲು ರಸ್ತೆಯ ಇಕ್ಕೆಲಗಳಲ್ಲಿ ಪೈಪ್ ಲೈನ್ ಗೆ ಅಗೆದು ಮಣ್ಣು ತೆಗೆದಿದ್ದರಿಂದ ರಸ್ತೆಗೆ ಮಣ್ಣು ಚೆಲ್ಲಿ ಸಂಚಾರ ಸ್ಥಗಿತಗೊಂಡ ಬಗ್ಗೆ ಚರ್ಚೆಯಾಯಿತು, ಇದಲ್ಲದೆ ನಿವೇಶನ ಜಾಗದ ಬಗ್ಗೆ, ಪಂಪ್ ಆಪರೇಟರ್ ರಾಜಿನಾಮೆ ಬಗ್ಗೆ ಚರ್ಚೆ ನಡೆಯಿತು.

ಪಶು ಇಲಾಖೆಯ ಡಾ.ಮೇಘಶ್ರೀ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಷಾಕುಮಾರಿ, ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಶಿಲ್ಪಾ, ಕೃಷಿ ಇಲಾಖೆಯ ನಂದಿತ, ತೋಟಗಾರಿಕೆ ಇಲಾಖೆಯ ವಿಜೇತ್, ಮೆಸ್ಕಾಂ ನ ಇಂಜಿನಿಯರ್ ಪ್ರಸಾದ್, ಗ್ರಾಮ ಆಡಳಿತಾಧಿಕಾರಿ ಶಿವಕುಮಾರ್, ಜಲಜೀವನ್ ನ ಸುರೇಶ್, ಮಕ್ಕಳ ಹಕ್ಕುಗಳ ಬಗ್ಗೆ ದಿವ್ಯ ಮಾಹಿತಿ ನೀಡಿದ್ದಾರೆ. ಗ್ರಾ.ಪಂ ಸಿಬ್ಬಂದಿ ಗಿರಿಧರ ಕೆ ವರದಿವಾಚಿಸಿದರು. ಪಿಡಿಒ ಪದ್ಮಯ್ಯ ಸ್ವಾಗತಿಸಿ, ವಂದಿಸಿದರು. ಪುರುಷೋತ್ತಮ ಕಲ್ಲೇರಿ, ಭವ್ಯ ಕಜೆಮೂಲೆ ಸಹಕರಿಸಿದರು.

ಲಂಚ ಭ್ರಷ್ಟಾಚಾರ ವಿರೋಧಿ ಫಲಕದ ಹಸ್ತಾಂತರ


ಗ್ರಾಮ ಸಭೆಯಲ್ಲಿ ಸುದ್ದಿ ಮಾದ್ಯಮ ದ ಸಹಯೋಗದಲ್ಲಿ ನಡೆಯುವ ಲಂಚ ಭ್ರಷ್ಟಾಚಾರ ವಿರೋಧಿ ಫಲಕದ ಹಸ್ತಾಂತರ ನಡೆಸಲಾಯಿತು.