ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಸಭೆ

0

ವಾರ್ಷಿಕೋತ್ಸವದ ಪ್ರಯುಕ್ತ ಮೂರು ದಿನದ ಪ್ರೋ ಮಾದರಿಯ ಕಬಡ್ಡಿ ಪಂದ್ಯಾಟದ ಆಯೋಜನೆ

ಸಂಘಟನಾ ಸಮಿತಿ ರಚನೆ : ಅಧ್ಯಕ್ಷ -ಸಂಶುದ್ದೀನ್, ಸಂಚಾಲಕ -ರಾಜೇಶ್ ಸುಬ್ರಹ್ಮಣ್ಯ, ಕಾರ್ಯದರ್ಶಿ- ಶರತ್ ಎಣ್ಮೂರು, ಖಜಾಂಜಿ-ಜಯಪ್ರಕಾಶ್ ಸುಳ್ಯ

ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ 8 ನೇ ವಾರ್ಷಿಕೋತ್ಸವದ ಸಮಾಲೋಚನಾ ಸಭೆಯು ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ಜು.18 ರಂದು ಸಂಘದ ಅಧ್ಯಕ್ಷ ಶಿವಪ್ರಕಾಶ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಎಸ್.ಪಿ.ಲೋಕನಾಥ್, ಮಾಜಿ ಅಧ್ಯಕ್ಷ ಗಿರಿಧರ ಸ್ಕಂದ, ಗೌರವಸಲಹೆಗಾರ ಜಿ.ಜಿ.ನಾಯಕ್ ಸುಳ್ಯ, ಕಾರ್ಯದರ್ಶಿ ಸತೀಶ್
ಕಲ್ಲುಗುಂಡಿ ಉಪಸ್ಥಿತರಿದ್ದರು.

ತಾಲೂಕಿನಲ್ಲಿ ಕಾರ್ಯಕ್ರಮಗಳಿಗೆ ಧ್ವನಿ, ಬೆಳಕು, ಶಾಮಿಯಾನ ಅಳವಡಿಸುವ ಸಂದರ್ಭದಲ್ಲಿ ಏಕ ದರ ಪಟ್ಟಿಯನ್ನು ನಿಗದಿ ಪಡಿಸುವ ಕುರಿತು ಸಂಘದ ಪದಾಧಿಕಾರಿಗಳ ಜತೆ ವಿಚಾರ ವಿಮರ್ಶೆ ನಡೆಸಿ ಸರ್ವಾನುಮತದಿಂದ ಒಪ್ಪಿಗೆ ಪಡೆದು ನಿರ್ಣಯಿಸಲಾಯಿತು.

ಸಂಘದ 8 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಅಮೆಚೂರ್ ಕಬಡ್ಡಿಅಸೋಸಿಯೇಷನ್ ಸಹಯೋಗದಲ್ಲಿ
ಮುಂದಿನ ನವೆಂಬರ್ ತಿಂಗಳ (17,18,19) ಮೂರು ದಿನದ ಪ್ರೋ ಮಾದರಿಯ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವನ್ನು
ನಡೆಸುವ ಕುರಿತು ಚರ್ಚಿಸಲಾಯಿತು.

ಕಬಡ್ಡಿ ಪಂದ್ಯಾಟದ ರೂಪು ರೇಷೆಯ ಬಗ್ಗೆ ಸಂಚಾಲಕ ಜಿ.ಎ.ಮಹಮ್ಮದ್ , ಶಾಫಿ ಪೈಚಾರು ವಿವರ ನೀಡಿದರು. ಕಾರ್ಯಕ್ರಮ ದ ಪೂರ್ವ ಭಾವಿಯ ಸಿದ್ದತೆಯ ಕುರಿತು ರಾಜೇಶ್ ಸುಬ್ರಹ್ಮಣ್ಯ, ಸಂಶುದ್ದೀನ್ , ಗುರುದತ್ ನಾಯಕ್ ಸಲಹೆ ನೀಡಿದರು.
ಸಂಘದ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡುವುದರೊಂದಿಗೆ
ಪಂದ್ಯಾಟದ ಆಯೋಜನೆಗಾಗಿ ನೂತನ ಸಂಘಟನಾ ಸಲಹಾ ಸಮಿತಿಯನ್ನು ರಚನೆ ಮಾಡಲಾಯಿತು.


ನೂತನ ಸಮಿತಿಯ
ಅಧ್ಯಕ್ಷ ಸಂಶುದ್ದೀನ್ ಭಾರತ್ ಶಾಮಿಯಾನ, ಸಂಚಾಲಕ ರಾಜೇಶ್ ಸುಬ್ರಹ್ಮಣ್ಯ ರಾಜ್ ಸೌಂಡ್ಸ್ , ಉಪಾಧ್ಯಕ್ಷರು ವಿಶ್ವನಾಥ ಭಾರದ್ವಾಜ್ ಸ್ಟಾಂಡರ್ಡ್ ಸೌಂಡ್ಸ್ ಬೆಳ್ಳಾರೆ, ಗುರುದತ್ ನಾಯಕ್ ಗುರು ಶಾಮಿಯಾನ, ಜಿ.ಎ.ಮಹಮ್ಮದ್ ಸಹನಾ ಶಾಮಿಯಾನ, ಶಾಫಿ ಪೈಚಾರು ಪ್ರಗತಿ ಸೌಂಡ್ಸ್ , ಪ್ರಧಾನ ಕಾರ್ಯದರ್ಶಿ ಶರತ್ ಎಣ್ಮೂರು ದೇವಿ ಸೌಂಡ್ಸ್ , ಖಜಾಂಜಿ ಜಯಪ್ರಕಾಶ್ ಸ್ವಾತಿ ಸೌಂಡ್ಸ್ ಸುಳ್ಯ,
ಜತೆ ಕಾರ್ಯದರ್ಶಿ ಶಿವಪ್ರಸಾದ್ ಜ್ಯೋತಿ ಸೌಂಡ್ಸ್ ಸುಳ್ಯ, ಜತೆ ಖಜಾಂಜಿ ರಜಾಕ್ ಹಾಗೂ
ವಲಯದ ಸಮಿತಿ ಸಂಚಾಲಕರನ್ನು ನೇಮಿಸಲಾಯಿತು. ಉಪ ಸಮಿತಿ ರಚಿಸಲಾಯಿತು.
ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದರು.

ಸಂಘದ ಗೌರವ ಸಲಹೆಗಾರ ಜಿ.ಜಿ.ನಾಯಕ್ ಪ್ರಾರ್ಥಿಸಿದರು. ಕಾರ್ಯದರ್ಶಿ ಸತೀಶ್ ಕಲ್ಲುಗುಂಡಿ ಸ್ವಾಗತಿಸಿ, ವಂದಿಸಿದರು.